ದೋಕಲಾ: ಸುಷ್ಮಾ ವಿರುದ್ಧ ರಾಹುಲ್ ವಾಗ್ದಾಳಿ

7

ದೋಕಲಾ: ಸುಷ್ಮಾ ವಿರುದ್ಧ ರಾಹುಲ್ ವಾಗ್ದಾಳಿ

Published:
Updated:

ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವಿರುದ್ಧ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹರಿಹಾಯ್ದಿದ್ದಾರೆ. ದೋಕಲಾ ವಿಚಾರದಲ್ಲಿ ಚೀನಾ ಎದುರು ಸುಷ್ಮಾ ಮಂಡಿಯೂರಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ರಾಜತಾಂತ್ರಿಕ ಮಾರ್ಗದಲ್ಲಿ ದೋಕಲಾ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳಲಾಗಿದ್ದು, ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ ಎಂದು ಸುಷ್ಮಾ ಅವರು ಸಂಸತ್ತಿಗೆ ಮಾಹಿತಿ ನೀಡಿದ್ದ ಮರುದಿನ ರಾಹುಲ್ ಈ ಆರೋಪ ಹೊರಿಸಿದ್ದಾರೆ. 

‘ಸುಷ್ಮಾ ಅವರು ಚೀನಾದ ಶಕ್ತಿಯ ಮುಂದೆ ದುರ್ಬಲರ ರೀತಿ ತಲೆಬಾಗಿದ್ದಾರೆ. ಅವರ ಈ ದಾಸ್ಯದ ನಡೆಯು ಗಡಿಕಾಯುವ ನಮ್ಮ ವೀರಯೋಧರಿಗೆ ದ್ರೋಹ ಬಗೆದಂತೆ’ ಎಂದು ರಾಹುಲ್ ಆರೋಪಿಸಿದ್ದಾರೆ. ದೋಕಲಾದಲ್ಲಿ ಚೀನಾ ಮತ್ತೆ ಕಾಮಗಾರಿ ಶುರುಮಾಡಿದೆ ಎಂಬ ಅಮೆರಿಕ ಸಂಸದೆಯ ಮಾತನ್ನು ಅವರು ಉಲ್ಲೇಖಿಸಿದ್ದಾರೆ. 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 1

    Angry

Comments:

0 comments

Write the first review for this !