ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮನ್‌ವೆಲ್ತ್ ಕೂಟದ ಮೇಲೆ ಕಣ್ಣು

Last Updated 4 ಮಾರ್ಚ್ 2018, 19:41 IST
ಅಕ್ಷರ ಗಾತ್ರ

ಪಟಿಯಾಲ: ಫೆಡರೇಷನ್ ಕಪ್‌ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ಗೆ ಸೋಮವಾರ ಇಲ್ಲಿ ಚಾಲನೆ ಸಿಗಲಿದ್ದು ಕಾಮನ್‌ವೆಲ್ತ್‌ ಕೂಟಕ್ಕೆ ಆಯ್ಕೆಯಾಗುವ ಭಾರತ ತಂಡದಲ್ಲಿ ಸ್ಥಾನ ಗಳಿಸುವ ಗುರಿಯೊಂದಿಗೆ ಕ್ರೀಡಾಪಟುಗಳು ಕಣಕ್ಕೆ ಇಳಿಯಲಿದ್ದಾರೆ.

ರಾಷ್ಟ್ರೀಯ ಕ್ರೀಡಾ ಸಂಸ್ಥೆಯ ಆವರಣದಲ್ಲಿ ಸ್ಪರ್ಧೆಗಳು ನಡೆಯಲಿವೆ. ಕಾಮನ್‌ವೆಲ್ತ್‌ ಕೂಟಕ್ಕೆ ಒಟ್ಟು 37 ಮಂದಿಯ ತಂಡವನ್ನು ಕಳುಹಿಸಲು ಭಾರತ ಸಿದ್ಧತೆ ನಡೆಸುತ್ತಿದೆ.

ನಾಲ್ವರು ವೇಗದ ನಡಿಗೆಯವರನ್ನು ಮಾತ್ರ ಈ ವರೆಗೆ ಆಯ್ಕೆ ಮಾಡಿದ್ದು ಉಳಿದವರ ಆಯ್ಕೆಯನ್ನು ಫೆಡರೇಷನ್ ಕಪ್‌ ಚಾಂಪಿಯನ್‌ಷಿಪ್‌ನ ನಂತರ ಮಾಡಲಿದೆ.

ಜಾವೆಲಿನ್ ಥ್ರೋ ಅಥ್ಲೀಟ್‌ ನೀರಜ್‌ ಚೋಪ್ರಾ, ಹೈ ಜಂಪ್‌ನಲ್ಲಿ ಮಿಂಚಿರುವ ತೇಜಸ್ವಿನ್ ಶಂಕರ್‌, ಶಾಟ್‌ ಪಟ್‌ ಕ್ರೀಡಾಪಟು ತಜಿಂದರ್‌ ಪಾಲ್‌ ಸಿಂಗ್ ಮುಂತಾದವರು ಕೂಟದ ಪ್ರಮುಖ ಆಕರ್ಷಣೆಯಾಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT