ರಾಜ್ಯದ ಅಂಧ ಮತದಾರರಿಗೆ ಬ್ರೈಲ್‌ ಎಪಿಕ್‌ ಕಾರ್ಡ್‌: ರಾಹುಲ್ ಗಾಂಧಿ ಮೆಚ್ಚುಗೆ

7
ಚುನಾವಣಾ ಆಯೋಗ ಪ್ರಶಂಸಿಸಿ ಪತ್ರ

ರಾಜ್ಯದ ಅಂಧ ಮತದಾರರಿಗೆ ಬ್ರೈಲ್‌ ಎಪಿಕ್‌ ಕಾರ್ಡ್‌: ರಾಹುಲ್ ಗಾಂಧಿ ಮೆಚ್ಚುಗೆ

Published:
Updated:

ನವದೆಹಲಿ: ಕರ್ನಾಟಕದಲ್ಲಿ ದೃಷ್ಟಿದೋಷವುಳ್ಳ ಮತದಾರರಿಗೆ ಬ್ರೈಲ್ ಎಪಿಕ್‌ ಕಾರ್ಡ್‌ (ಮತದಾರರ ಗುರುತಿನ ಚೀಟಿ) ನೀಡಲು ಚುನಾವಣಾ ಆಯೋಗ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಭಾನುವಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದೇಶದಾದ್ಯಂತ ಇರುವ ಎಲ್ಲ ಅಂಧ ಮತದಾರರಿಗೂ ಮತದಾನದಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ಬ್ರೈಲ್‌ ಎಪಿಕ್‌ ಕಾರ್ಡ್‌ ವಿತರಿಸಬೇಕು ಎಂದು ಅವರು ಆಯೋಗವನ್ನು ಒತ್ತಾಯಿಸಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ ಒ.ಪಿ.ರಾವತ್‌ ಅವರಿಗೆ ಈ ಬಗ್ಗೆ ಪತ್ರ ಬರೆದಿರುವ ರಾಹುಲ್‌, ‘ಅಂಗವಿಕಲರು ಮತದಾನ ಪ್ರಕ್ರಿಯೆಯಲ್ಲಿ ಸುಲಭವಾಗಿ ಪಾಲ್ಗೊಳ್ಳುವಂತೆ ಮಾಡಲು ಆಯೋಗ ಇನ್ನಷ್ಟು ಕ್ರಮ ತೆಗೆದುಕೊಳ್ಳಲಿದೆ ಎನ್ನುವ ವಿಶ್ವಾಸ ನನಗಿದೆ. ಈಗ ತೆಗೆದುಕೊಂಡಿರುವ ಎಲ್ಲ ಕ್ರಮಗಳಿಗೂ ಕಾಂಗ್ರೆಸ್‌ ಪಕ್ಷ ಹೃತ್ಪೂರ್ವಕ ಬೆಂಬಲ ನೀಡಲಿದೆ‘ ಎಂದು ತಿಳಿಸಿದ್ದಾರೆ.‘ಕರ್ನಾಟಕದಲ್ಲಿ ಚುನಾವಣಾ ಆಯೋಗ ಅತ್ಯದ್ಭುತ ಕ್ರಮ ತೆಗೆದುಕೊಂಡಿದೆ. ಇದನ್ನು ಪ್ರಶಂಸಿಸಿ ಈ ಪತ್ರ ಬರೆಯುತ್ತಿದ್ದೇನೆ. ದೃಷ್ಟಿದೋಷವುಳ್ಳ ಮತದಾರರು ಚುನಾವಣಾ ಪ್ರಕ್ರಿಯೆಯಿಂದ ಹೊರಗುಳಿಯದಂತೆ ಮಾಡಲು ಬ್ರೈಲ್‌ ಎಪಿಕ್‌ ಕಾರ್ಡ್‌ ಒದಗಿಸುವ ಮೂಲಕ ಆಯೋಗವು ಸರಿಯಾದ ಹೆಜ್ಜೆ ಇಟ್ಟಿದೆ. ಇದರಿಂದ ಎಲ್ಲ ಮತದಾರರು ಚುನಾವಣೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿದೆ’ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !