ಮಾನಸ ಸರೋವರದಲ್ಲಿ ರಾಹುಲ್‌: ಯಾತ್ರೆ ಫೋಟೊಗಳ ಸತ್ಯ–ಮಿಥ್ಯೆಯ ಕಥನ

7

ಮಾನಸ ಸರೋವರದಲ್ಲಿ ರಾಹುಲ್‌: ಯಾತ್ರೆ ಫೋಟೊಗಳ ಸತ್ಯ–ಮಿಥ್ಯೆಯ ಕಥನ

Published:
Updated:
Deccan Herald

ಕೈಲಾಸ ಮಾನಸ ಸರೋವರ, ಸೌಮ್ಯವಾಗಿ ಹರಿಯುವ ನೀರು ಹಗೆತನವಿರದ ಪ್ರಶಾಂತತೆ ಎಂದು ಬಣ್ಣಿಸಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ನಿಸರ್ಗದ ಸೊಬಗಿನ ಚಿತ್ರಗಳನ್ನು ಪ್ರಕಟಿಸಿದ್ದರು. ಈ ಚಿತ್ರಗಳ ಅಸಲಿಯತ್ತಿನ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಜೋರು ಚರ್ಚೆ ನಡೆದು, ಚಿತ್ರಗಳೆಲ್ಲ ಗೂಗಲ್‌ ಸಂಗ್ರಹದ್ದು ಎಂದು ಟ್ವೀಟಿಗರು ಡಿಟಿಟಲ್‌ ಸಾಕ್ಷ್ಯ–ಪುರಾವೆಗಳನ್ನು ಪ್ರಕಟಿಸಿದ್ದಾರೆ. 

ನೇಪಾಳದಲ್ಲಿ ಮಾಂಸಾಹಾರ ಸೇವಿಸಿ ರಾಹುಲ್‌ ‍ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ ಎಂಬ ಸುದ್ದಿ ಹರಡಿ ನೆಟಿಜನ್‌ಗಳು ಟೀಕಾ ಪ್ರಹಾರ ನಡೆಸಿದ್ದರು. ಆಗಸ್ಟ್‌ 31ರಂದು ಮಾನಸ ಸರೋವರ ಯಾತ್ರೆ ಕೈಗೊಂಡಿದ್ದ ಅವರು ಅಲ್ಲಿನ ಚಿತ್ರಗಳನ್ನು ಪ್ರಕಟಿಸುತ್ತಿದ್ದಂತೆ ಮತ್ತೊಮ್ಮೆ ಸಾಮಾಜಿಕ ಮಾಧ್ಯಮ ಬಳಕೆದಾರರ ಸೂಕ್ಷ್ಮದರ್ಶನದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಗೂಗಲ್‌ ಸಂಗ್ರಹ ಚಿತ್ರಗಳನ್ನು ಬಳಸಿ, ಯಾತ್ರೆಯಲ್ಲಿ ತಾನೇ ತೆಗೆದ ಚಿತ್ರಗಳು ಎನ್ನುವಂತೆ ರಾಹುಲ್‌ ಪ್ರಕಟಿಸಿದ್ದಾರೆ– ಎಂದು ಆರೋಪಿಸಲಾಗುತ್ತಿದೆ. 

ಸಹ ಯಾತ್ರಿಕನೊಂದಿಗೆ ಕೈಲಾಸ–ಮಾನಸ ಸರೋವರದಲ್ಲಿ ನಿಂತಿರು ರಾಹುಲ್‌ ನಿಂತಿರುವ ಚಿತ್ರ ಫೋಟೋಶಾಪ್‌ನಿಂದ ಮಾರ್ಪಡಿಸಿರುವುದು ಎಂದು ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಗುರುವಾರ ಆರೋಪಿಸಿದ್ದರು. ಚಾಕೆಟ್‌, ಟೋಪಿ ಮತ್ತು ಸನ್‌ಗ್ಲಾಸ್‌ ಧರಿಸಿರುವ ರಾಹುಲ್‌ ಗಾಂಧಿ ಸಹ ಯಾತ್ರಿಕನೊಟ್ಟಿಗೆ ಫೋಸ್‌ ನೀಡಿದ್ದಾರೆ. ಈ ಚಿತ್ರದಲ್ಲಿ ನೆರಳು ಕಾಣೆಯಾಗಿರುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಸಚಿವರ ಈ ಟ್ವೀಟ್‌ಗೆ ಕೆಲವು ಮಂದಿ ಮೂಲ ವಿಜ್ಞಾನದ ಪಾಠ ಮಾಡಿದ್ದರೆ, ಇನ್ನೂ ಕೆಲವರು ರಾಹುಲ್‌ ಮೇಲೆ ಪದಗಳ ದಾಳಿ ನಡೆಸಿದ್ದಾರೆ.  

ಫೇಕ್‌ ಫೋಟೋಗಳ ಬಗ್ಗೆ ಕಾಂಗ್ರೆಸ್‌ ಮತ್ತು ಬಿಜೆಪಿ ಮಂದಿಯ ವಾಗ್ವಾದದ ನಿರಂತರವಾಗಿದೆ. ಬಿಜೆಪಿ ಮಹಿಳಾ ಮೋರ್ಚಾದ ಸಾಮಾಜಿಕ ಮಾಧ್ಯಮಗಳ ನಿರ್ವಹಣೆ ಮಾಡುತ್ತಿರುವ ಪ್ರೀತಿ ಗಾಂಧಿ, ಇಂಟರ್‌ನೆಟ್‌ನಿಂದ ಚಿತ್ರಗಳನ್ನು ಫೋಟೋ ಪ‍ಡೆದು ಅದನ್ನು ತನ್ನದೇ ಎನ್ನುವಂತೆ ರಾಹುಲ್‌ ಪ್ರಕಟಿಸಿರುವುದಾಗಿ ಆರೋಪಿಸಿದ್ದಾರೆ. ಬಿಜೆಪಿ ಕಾರ್ಯಕರ್ತ ವಿಕಾಸ್‌ ಪಾಂಡೆ ಅದೇ ಚಿತ್ರಗಳನ್ನು ಟ್ವೀಟಿಸಿ, ಅವರು ನಿಜಕ್ಕೂ ಅಲ್ಲಿದ್ದಾರೆಯೇ ಅಥವಾ ನೇಪಾಳದಲ್ಲಿ ಹಂದಿ ಭಕ್ಷ್ಯಗಳನ್ನು ಸವಿಯುತ್ತಿದ್ದಾರೆಯೇ? ಎಂದಿದ್ದಾರೆ. ಈ ಟ್ವೀಟ್‌ 3.5 ಸಾವಿರ ಬಾರಿ ಮರುಹಂಚಿಕೆಯಾಗಿದ್ದು, 5 ಸಾವಿರಕ್ಕೂ ಹೆಚ್ಚು ಜನ ಮೆಚ್ಚಿದ್ದಾರೆ. ಈ ಟ್ವಿಟರ್‌ ಖಾತೆಗಳನ್ನು ಪ್ರಧಾನಿ ಮೋದಿ ಸೇರಿ ಅನೇಕ ಮುಖಂಡರು ಫಾಲೋ ಮಾಡುತ್ತಿದ್ದಾರೆ. 

’ದಯಮಾಡಿ ನಿಮ್ಮದೇ ಕ್ಯಾಮೆರಾದಿಂದ ತೆಗೆದಿರುವ ಫೋಟೋಗಳನ್ನು ಪ್ರಕಟಿಸಿ. ನಿಮ್ಮ ಸಾಮಾಜಿಕ ಮಾಧ್ಯಮಗಳ ನಿರ್ವಾಹಕರು ಅಂತರ್ಜಾಲದಿಂದ ಹಳೆಯ ಫೋಟೋಗಳನ್ನು ಡೌನ್‌ಲೋಡ್‌ ಮಾಡಿ ಪ್ರಕಟಿಸುತ್ತಿರುವಂತೆ ತೋರುತ್ತಿದೆ. ಕೈಲಾಸ ಮಾನಸ ಸರೋವರ ನಿಮ್ಮದೇ ಆದ ಒಂದು ಫೋಟೋ ಆದರೂ ಪ್ರಕಟಿಸಿ...’ ಎಂದು ವಿಕಾಸ್‌ ಸರಸ್ವತ್‌ ಎಂಬುವವರು ವ್ಯಂಗ್ಯವಾಡಿದ್ದಾರೆ. 

ನಂದಿತಾ ಠಾಕೂರ್‌, ಸುರೇಶ್‌ ನಖುವಾ, ಮರೇಶ್‌ ಹೀರಾರಂಭಮ, ವಿಶಾಲ್‌ ರಾಮಾನುಜ್‌ ಸೇರಿ ಅನೇಕ ಬಿಜೆಪಿ ಬೆಂಬಲಿಗರು ಈ ಚಿತ್ರಗಳನ್ನು ಪ್ರಕಟಿಸಿಕೊಂಡಿದ್ದಾರೆ. 

ಗೂಗಲ್‌ ಸಂಗ್ರಹದಲ್ಲಿ ದಾಖಲಾಗಿರುವ ಈ ಚಿತ್ರ ಜಸ್ಟ್‌ಡಯಲ್‌ ಸಾಮಾಜಿಕ ಜಾಲತಾಣದಲ್ಲಿ ಬಳಸಿಕೊಂಡಿರುವುದಾಗಿದೆ. ಈ ಬಗ್ಗೆಯೂ ಅನೇಕರು ಟ್ವೀಟ್‌ ಮಾಡಿದ್ದಾರೆ. 

ರಾಹುಲ್‌ ಗಾಂಧಿ ಅವರ ಫೋಟೋಗಳ ಬಗ್ಗೆ ಟೀಕೆ ವ್ಯಕ್ತಪಡಿಸಿರುವವರಿಗೆ ಕಾಂಗ್ರೆಸ್‌ ಉತ್ತರವಾಗಿ ಮತ್ತೊಂದು ಫೋಟೊ ಪ್ರಕಟಿಸಿದೆ. ಕೈಲಾಸ ಪರ್ವತಗಳ ಹಿನ್ನೆಲೆಯಲ್ಲಿ ರಾಹುಲ್‌ ಅವರ ಚಿತ್ರ ಪ್ರಕಟಿಸಿ, ಅದರೊಂದಿಗೆ ನಡಿಗೆಯ ವಿವರಗಳನ್ನು ದಾಖಲಿಸಿದ್ದಾರೆ. 34 ಕಿ.ಮೀ. ದೂರ, 13 ಗಂಟೆ ನಿರಂತರ ಟ್ರೆಕ್ಕಿಂಗ್‌ ಕೈಗೊಂಡಿರುವ ಫಿಟ್‌ಬಿಟ್‌ ಮಾಹಿತಿ ಪ್ರಕಟಿಸಲಾಗಿದೆ. ಪರ್ವತಗಳ ನಡುವಿನ ಸೌಂದರ್ಯವನ್ನು ಸವಿದಿರುವುದಕ್ಕೆ ಸಾಕ್ಷಿಯಾಗಿ ವಿಡಿಯೊ ಕೂಡ ಪ್ರಕಟಿಸಿದ್ದಾರೆ ರಾಹುಲ್‌. 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !