ರಾಹುಲ್‌ಗೆ ಲೋಕಸಭೆಯಲ್ಲಿ ಮೊದಲ ಸಾಲಿನ ಸೀಟು ಕೇಳಲ್ಲ: ಕಾಂಗ್ರೆಸ್

ಶುಕ್ರವಾರ, ಜೂಲೈ 19, 2019
23 °C

ರಾಹುಲ್‌ಗೆ ಲೋಕಸಭೆಯಲ್ಲಿ ಮೊದಲ ಸಾಲಿನ ಸೀಟು ಕೇಳಲ್ಲ: ಕಾಂಗ್ರೆಸ್

Published:
Updated:

ನವದೆಹಲಿ: ರಾಹುಲ್ ಗಾಂಧಿ ಅವರಿಗೆ ಲೋಕಸಭೆಯಲ್ಲಿ ಮುಂದಿನ ಸಾಲಿನ ಸೀಟು ಕೇಳುವುದಿಲ್ಲ ಎಂದು ಕಾಂಗ್ರೆಸ್ ಬುಧವಾರ  ಸ್ಪಷ್ಟಪಡಿಸಿದೆ. 

ಈ ಕುರಿತ ಮಾಧ್ಯಮ ವರದಿಗಳನ್ನು ತಳ್ಳಿಹಾಕಿರುವ ಲೋಕಸಭೆಯ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ, ‘ರಾಹುಲ್ ಅವರಿಗೆ 466ನೇ ಸೀಟು ನೀಡುವಂತೆ ಪ್ರಸ್ತಾಪಿಸಲಾಗಿದೆ. ಮೊದಲ ಸಾಲಿನ ಸೀಟಿಗೆ ಬೇಡಿಕೆಯಿಡಲಾಗಿದೆ ಎಂಬುದು ಸುಳ್ಳು ಸುದ್ದಿ’ ಎಂದು ಟ್ವಿಟರ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ. 

ಕಳೆದ ಲೋಕಸಭೆಯಲ್ಲೂ ರಾಹುಲ್ ಎರಡನೇ ಸಾಲಿನಲ್ಲಿ ಕುಳಿತುಕೊಳ್ಳುತ್ತಿದ್ದರು. ಸದನದಲ್ಲಿ ಪಕ್ಷಗಳ ಸಂಖ್ಯಾಬಲ ಆಧರಿಸಿ ಮುಂದಿನ ಸಾಲು ನಿಗದಿಪಡಿಸಲಾಗುತ್ತದೆ. ಈ ಬಾರಿ ಕಾಂಗ್ರೆಸ್‌ಗೆ 2 ಸೀಟುಗಳು ಲಭ್ಯವಾಗಿದ್ದು, ಇವುಗಳನ್ನು ಅಧಿರ್ ರಂಜನ್ ಚೌಧರಿ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಮೀಸಲಿಡಲಾಗಿದೆ.

ಡಿಎಂಕೆ ಪಕ್ಷದ ಟಿ.ಆರ್. ಬಾಲು, ಎಸ್‌ಪಿ ವರಿಷ್ಠ ಮುಲಾಯಂ ಸಿಂಗ್ ಯಾದವ್ ಅವರಿಗೆ ಮೊದಲ ಸಾಲು ಸಿಗುವ ಸಾಧ್ಯತೆಯಿದೆ. 

ಆಡಳಿತ ಪಕ್ಷದ ಸಾಲಿನಲ್ಲಿ ಮೊದಲಿಗೆ ಪ್ರಧಾನಿ ನರೇಂದ್ರ ಮೋದಿ, ಬಳಿಕ ರಾಜನಾಥ್ ಸಿಂಗ್, ಅಮಿತ್ ಶಾ, ನಿತಿನ್ ಗಡ್ಕರಿ ಹಾಗೂ ಡಿ.ವಿ. ಸದಾನಂದ ಗೌಡ ಅವರಿಗೆ ಆಸನ ನೀಡಲಾಗಿದೆ.

ಟ್ವಿಟರ್‌ನಲ್ಲಿ ಕೋಟಿ ಫಾಲೋಯರ್ಸ್‌
ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಫಾಲೋಯರ್ಸ್‌ ಸಂಖ್ಯೆ ಕೋಟಿ ದಾಟಿದೆ.

ಈ ಮೈಲುಗಲ್ಲು ತಲುಪಲು ಕಾರಣರಾದ ಎಲ್ಲರಿಗೂ ಅವರು ಧನ್ಯವಾದ ಹೇಳಿದ್ದಾರೆ. ಅಮೇಠಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಬೆಂಬಲಿಗರ ಜೊತೆ ಈ ಸಂಭ್ರಮವನ್ನು ಹಂಚಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. 

ಕಾಂಗ್ರೆಸ್ ಮುಖಂಡರ ಪೈಕಿ ಶಶಿ ತರೂರ್‌ ಅವರು ಕಳೆದ ವರ್ಷ ಅತಿಹೆಚ್ಚು ಫಾಲೋಯರ್ಸ್‌ ಹೊಂದಿದ್ದರು. ಸದ್ಯ ತರೂರ್ ಹಿಂಬಾಲಕರ ಸಂಖ್ಯೆ 69 ಲಕ್ಷ.

ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ನಾಯಕರಿಗಿಂತ ಮುಂದಿದ್ದು, ಅವರ ಫಾಲೋಯರ್‌ಗಳ ಸಂಖ್ಯೆ 4.8 ಕೋಟಿ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !