ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಗಟ್ಟೆ ಸಮೀಕ್ಷೆ ಬಗ್ಗೆ ಭಯಬೇಡ, ಅದೆಲ್ಲಾ ಸುಳ್ಳು:  ರಾಹುಲ್ ಗಾಂಧಿ

Last Updated 22 ಮೇ 2019, 17:09 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲು ಇನ್ನೇನು ಕೆಲವೇ ಗಂಟೆಗಳು ಉಳಿದಿವೆ. ಹೀಗಿರುವಾಗ ಫಲಿತಾಂಶ ಬಗ್ಗೆ ಪಕ್ಷದ ಬೆಂಬಲಿಗರು ಕಾರ್ಯಕರ್ತರು ಆತಂಕ ಪಡಬೇಡಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಮುಂದಿನ 24 ಗಂಟೆಗಳು ತುಂಬಾ ಮುಖ್ಯವಾದದು. ಎಚ್ಚರದಿಂದಿರಿ, ಭಯ ಪಡಬೇಡಿ, ನಾವುಸತ್ಯಕ್ಕಾಗಿ ಹೋರಾಡುತ್ತಿದ್ದೇವೆ. ಸುಳ್ಳು ಮತಗಟ್ಟೆ ಸಮೀಕ್ಷೆಗಳಿಂದ ಧೈರ್ಯಗುಂದಬೇಡಿಎಂದು ರಾಹುಲ್ ಬುಧವಾರ ಟ್ವೀಟಿಸಿದ್ದಾರೆ.

ತಮ್ಮ ಬಗ್ಗೆ ಹಾಗೂ ಪಕ್ಷದ ಮೇಲೆ ನಂಬಿಕೆ ಇರಲಿ. ನಿಮ್ಮ ಕಠಿಣ ಶ್ರಮ ವ್ಯರ್ಥವಾಗುವುದಿಲ್ಲ ಎಂದು ರಾಹುಲ್ ಹೇಳಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮತ್ತೊಮ್ಮೆ ಅಧಿಕಾರಕ್ಕೇರುತ್ತದೆ ಎಂದು ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು, ಇತ್ತ ವಿಪಕ್ಷಗಳು ಇವಿಎಂ ದುರ್ಬಳಕೆಯಾಗಿದೆ ಎಂದು ಆರೋಪಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT