ಮೊಬೈಲ್‍ನಲ್ಲಿ ಅಶ್ಲೀಲ ಚಿತ್ರ ನೋಡುತ್ತಿರುವ ರಾಹುಲ್ ಗಾಂಧಿ, ಇದು ಫೇಕ್ ಫೋಟೊ!

7

ಮೊಬೈಲ್‍ನಲ್ಲಿ ಅಶ್ಲೀಲ ಚಿತ್ರ ನೋಡುತ್ತಿರುವ ರಾಹುಲ್ ಗಾಂಧಿ, ಇದು ಫೇಕ್ ಫೋಟೊ!

Published:
Updated:

ಬೆಂಗಳೂರು: ಫೋಟೊ ಕಭೀ ಝೂಟ್ ನಹೀ ಬೋಲ್ತೀ..ದೇಖ್‍ಲೋ ರಾಹುಲ್ ಗಾಂಧಿ ಕ್ಯಾ ಕರ್ ರಹಾ ಹೈ (ಚಿತ್ರಗಳು ಸುಳ್ಳು ಹೇಳುವುದಿಲ್ಲ, ನೋಡಿ ರಾಹುಲ್ ಏನು ನೋಡುತ್ತಿದ್ದಾನೆ) ಎಂಬ ಶೀರ್ಷಿಕೆಯೊಂದಿಗೆ ರಾಹುಲ್ ಗಾಂಧಿಯ ಫೋಟೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಕೈಯಲ್ಲಿರುವ ಮೊಬೈಲ್ ಸ್ಕ್ರೀನ್ ನಲ್ಲಿ ಬಿಕಿನಿ ತೊಟ್ಟ ಮಹಿಳೆಯ ಚಿತ್ರ, ಅದನ್ನು ರಾಹುಲ್ ನೋಡುತ್ತಿರುವ ಫೋಟೊ ಅದಾಗಿದೆ. 

ಯೋಗಿ ಸರ್ಕಾರ್ ಎಂಬ ಫೇಸ್ ಬುಕ್ ಪುಟದಲ್ಲಿ ಈ ಫೋಟೊ ಜುಲೈ 30ರಂದು ಅಪ್‍ಲೋಡ್ ಆಗಿದ್ದು, ಇಲ್ಲಿವರೆಗೆ 11 ಸಾವಿರ ಬಾರಿ ಶೇರ್ ಆಗಿದೆ. 130,000 ಸದಸ್ಯರಿರುವ ಮೋದಿ ಮಿಷನ್ 2019 ಎಂಬ ಫೇಸ್‍ಬುಕ್ ಪುಟದಲ್ಲಿಯೂ ಈ ಫೋಟೊ ಶೇರ್ ಆಗಿದೆ. ಟ್ವಿಟರ್‌ನಲ್ಲಿಯೂ ಫೋಟೊ ವೈರಲ್ ಆಗಿತ್ತು.

ಗುಜರಾತ್‍ನ ಜಮ್ನಾನಗರ್‍‍ನಲ್ಲಿರುವ ಬಿಜೆಪಿ ಐಟಿ ಸೆಲ್ ಸಹ ಸಂಚಾಲಕ ಮನೀಶ್ ಪಾಂಡೆ ಈ ಚಿತ್ರವನ್ನು ಟ್ವೀಟ್ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ, ಪೀಯುಶ್ ಗೋಯಲ್, ನಿರ್ಮಲಾ ಸೀತಾರಾಮನ್ ಮೊದಲಾದವರು ಮನೀಶ್ ಪಾಂಡೆಯನ್ನು ಟ್ವಿಟರ್‌ನಲ್ಲಿ ಫಾಲೋ ಮಾಡುತ್ತಿದ್ದಾರೆ.

ಫೇಕ್ ಫೋಟೊ !
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಈ ಫೋಟೊ ಫೇಕ್. ಈ ಫೋಟೊದ ಸತ್ಯಾಸತ್ಯತೆಯನ್ನು ವರದಿ ಮಾಡಿರುವ ಆಲ್ಟ್ ನ್ಯೂಸ್ ಇದು ಫೋಟೊಶಾಪ್ ಮಾಡಿದ ಫೋಟೊ ಎಂದು ಹೇಳಿದೆ. ಗೂಗಲ್ ರಿವರ್ಸ್ ಇಮೇಜ್ ನಲ್ಲಿ ಸರ್ಚ್ ಮಾಡಿದಾಗ ರಾಹುಲ್ ಕೈಯಲ್ಲಿ ಮೊಬೈಲ್ ಇರುವ ಯಾವುದೇ ಫೋಟೊ ಪತ್ತೆಯಾಗಿಲ್ಲ.

Embed from Getty Images

ನವಂಬರ್ 2016ರಲ್ಲಿ ನೋಟು ರದ್ದತಿ ಆದಾಗ ಹಳೆ ನೋಟುಗಳನ್ನು ಬದಲಿಸಲು ರಾಹುಲ್ ನವದೆಹಲಿಯ ಬ್ಯಾಂಕ್‍ಗೆ ಬಂದಿದ್ದರು. ಆಗ ಕೈಯಲ್ಲಿ ನೋಟು ಹಿಡಿದುಕೊಂಡಿರುವ ಫೋಟೊವನ್ನು ಇಲ್ಲಿ ಫೋಟೊಶಾಪ್ ಮಾಡಿ ಹರಿಬಿಡಲಾಗಿದೆ.  ಕೈಯಲ್ಲಿ ಕರೆನ್ಸಿ ನೋಟು ಹಿಡಿದಿರುವ ರಾಹುಲ್ ಫೋಟೊ getty images ನಲ್ಲಿದೆ.

ಬರಹ ಇಷ್ಟವಾಯಿತೆ?

 • 19

  Happy
 • 1

  Amused
 • 3

  Sad
 • 3

  Frustrated
 • 6

  Angry

Comments:

0 comments

Write the first review for this !