ಶಿಮ್ಲಾ: ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿಬಿಡುವಿಲ್ಲದ ಪ್ರಚಾರ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇದೀಗ ಅಕ್ಕ ಪ್ರಿಯಾಂಕಾ ಗಾಂಧಿ ವದ್ರಾ ಮತ್ತು ಅಕ್ಕನ ಮಕ್ಕಳೊಂದಿಗೆ ಹಿಮಾಚಲ ಪ್ರದೇಶದ ಸುಂದರ ಗಿರಿಧಾಮದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಶಿಮ್ಲಾದಲ್ಲಿ ಅಕ್ಕ ಪ್ರಿಯಾಂಕ ಕಟ್ಟಿಸುತ್ತಿರುವ ಮನೆ ನೋಡಲುರಾಹುಲ್ ಗಾಂಧಿ ಬಂದರು. ಮಾರ್ಗಮಧ್ಯೆ ಸೊಲನ್ ಜಿಲ್ಲೆಯ ಡಾಬಾ ಒಂದರಲ್ಲಿ ಟೀ, ಮ್ಯಾಗಿನೂಡಲ್ಸ್ ಸೇವಿಸಿದರು.
ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಡಗಳಲ್ಲಿ ಕಾಂಗ್ರೆಸ್ ವಿಜಯ ಸಾಧಿಸಿದ ನಂತರ ಖುಷಿ ಮೂಡ್‌ನಲ್ಲಿದ್ದ ರಾಹುಲ್‌ಗೆ ಮುಖ್ಯಮಂತ್ರಿ ಆಯ್ಕೆಯ ಸವಾಲು ಎದುರಾಗಿತ್ತು. ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭದ ನಂತರ ರಾಹುಲ್ ವಿಶ್ರಾಂತಿ ಬಯಸಿ ಶಿಮ್ಲಾಕ್ಕೆ ಭೇಟಿ ನೀಡಿದ್ದಾರೆ.
ರಾಹುಲ್ ಬಂದಿರುವುದು ಅರಿತ ಕೆಲ ಕಾರ್ಯಕರ್ತರು ಮತ್ತು ಮಹಿಳೆಯರು ಡಾಬಾಕ್ಕೆ ಧಾವಿಸಿ ಅಭಿನಂದಿಸಿದರು. ಹಿಮಾಚಲ ಪ್ರದೇಶದ ರಾಜಕೀಯ ಬೆಳವಣಿಗೆಗಳ ಕುರಿತು ರಾಹುಲ್ ವಿಚಾರಿಸಿದರು. ‘ನಾನು ವೈಯಕ್ತಿಕ ಕಾರಣಕ್ಕೆ ಶಿಮ್ಲಾಕ್ಕೆ ಬಂದಿದ್ದೇನೆ ಅಷ್ಟೇ. ನಿಮ್ಮನ್ನೆಲ್ಲಾ ನೋಡಿದ್ದು ಖುಷಿಯಾಯಿತು’ ಎಂದು ರಾಹುಲ್ ಸ್ಥಳೀಯರೊಂದಿಗೆ ಮಾತನಾಡುತ್ತಾ ಹೇಳಿದರು.
ಛಾರಬ್ರಾದ ಹೊಟೆಲ್‌ನಲ್ಲಿ ರಾಹುಲ್ ಮತ್ತು ಪ್ರಿಯಾಂಕಾ ಉಳಿದುಕೊಂಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.