ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಅವಕಾಶಗಳಿಗಾಗಿ ಹೋರಾಡಿ; ಪುರುಷರಿಗಿಂತ ಕೀಳೆಂದು ಭಾವಿಸಬೇಡಿ: ರಾಹುಲ್ ಸಂದೇಶ

ಮಹಿಳಾ ದಿನಾಚರಣೆ
Last Updated 8 ಮಾರ್ಚ್ 2019, 12:47 IST
ಅಕ್ಷರ ಗಾತ್ರ

ಕೊರಾಪುತ್‌: ‘ನಿಮ್ಮ ಅವಕಾಶಗಳಿಗಾಗಿ ಹೋರಾಟ ನಡೆಸಿ. ನೀವು ಯಾವೊಬ್ಬ ಪುರುಷರಿಗಿಂತ ಕೀಳೆಂದು ಭಾವಿಸಬೇಡಿ’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಮಹಿಳೆಯರಿಗೆ ಕರೆ ನೀಡಿದರು.

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಇಲ್ಲಿನ ಶಿವ ಸಾಯಿ ಸಂಭಾಂಗಣದಲ್ಲಿ ಮಹಿಳೆಯರೊಂದಿಗೆ ನಡೆದ ಸಂವಾದದಲ್ಲಿಶುಕ್ರವಾರ ಭಾಗವಹಿಸಿದರು.

ಒಡಿಶಾದಲ್ಲಿ ಪ್ರತಿದಿನ ಎಂಟು ಮಹಿಳೆಯರ ಮೇಲೆ ಅತ್ಯಾಚಾರ ದೌರ್ಜನ್ಯ ಎಸಗಲಾಗುತ್ತಿದೆ. ಒಂದು ವರ್ಷದಲ್ಲಿ ಕೇವಲ ಏಳು ಮಹಿಳೆಯರಿಗೆ ಮಾತ್ರವೇ ನ್ಯಾಯ ದೊರೆಯುತ್ತಿದೆ. ಅತ್ಯಾಚಾರ ಪ್ರಕರಣಗಳನ್ನು ನಾವು ಸಹಿಸಬಾರದು ಎಂದು ಹೇಳಿದರು. ಇದೇ ವೇಳೆ, ಎಲ್ಲಿಯವರೆಗೆ ನಾವು ತುಳಿತಕ್ಕೊಳಗಾಗುತ್ತೇವೆಯೋ ಅಲ್ಲಿಯವರೆಗೂ ಸಮಸ್ಯೆಗಳನ್ನು ಹಿಮ್ಮೆಟ್ಟಿಸಲಾರೆವು ಎಂದೂ ತಿಳಿಸಿದರು.

‘ಗರ್ಭಿಣಿಯರು, ತಾಯಂದಿರ ಮರಣ ಪ್ರಕರಣಗಳಿಗೆ ಸಂಬಂಧಿಸಿದ ಮಾಹಿತಿ ಹಾಗೂ ಅವರಿಗೆ ಉತ್ತಮ ವೈದ್ಯಕೀಯ ಸೌಲಭ್ಯ ಕಲ್ಪಿಸುವ ಸಲುವಾಗಿ ಹೋರಾಡಬೇಕಿದೆ. ನಾವು ಕೋರಾಪುತ್‌ನ ರೈತರು ಹಾಗೂ ಮಹಿಳೆಯರಿಗೆ ನೆರವು ನೀಡುವುದು ಮಾತ್ರವಲ್ಲ. ಬದಲಾಗಿ ಇಲ್ಲಿನ ಯುವಕರು ಪ್ರಪಂಚದ ಇತರರೊಂದಿಗೆ ಸಂಪರ್ಕ ಸಾಧಿಸುವಂತೆ ಮಾಡಬೇಕಾಗಿದೆ’ ಎಂದರು.

‘ನಾವು ಮಹಿಳೆಯರ ಮೀಸಲಾತಿ ಮಸೂದೆ ತರಲು ಲೋಕಸಭೆ ಹಾಗೂ ವಿಧಾನಸಭೆಯಲ್ಲಿ ಪ್ರಯತ್ನಿಸುತ್ತಿದ್ದೇವೆ. ನಮ್ಮ ಸರ್ಕಾರ ರಚನೆಯಾದ ಕೂಡಲೇ ಲೋಕಸಭೆಯಲ್ಲಿ ಮಸೂದೆ ಮಂಡಿಸಲು ಪ್ರಯತ್ನಿಸುತ್ತೇವೆ’ ಎಂದು ಒತ್ತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT