ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿಯಾಗಲು ರಾಹುಲ್ ಗಾಂಧಿ ಅರ್ಹರು: ಆರ್‌ಜೆಡಿ ಮುಖಂಡ ತೇಜಸ್ವಿ ಯಾಧವ್ ಬೆಂಬಲ

Last Updated 27 ಜನವರಿ 2019, 11:32 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ದೇಶದಪ್ರಧಾನಿಯಾಗಲು ಸಮರ್ಥರಿದ್ದಾರೆ ಎಂದು ಆರ್‌ಜೆಡಿ ಮುಖಂಡ ತೇಜಸ್ವಿ ಯಾಧವ್ ಹೇಳಿದ್ದಾರೆ.

ಕಾಂಗ್ರೆಸ್‌ನ್ನು ಬೆಂಬಲಿಸಿದ ಯಾದವ್,ಬಿಜೆಪಿಯುಕಾಂಗ್ರೆಸ್ ಮುಖಂಡರ ವರ್ಚಸ್ಸನ್ನು ಹಾಳುಗೆಡವುದರಲ್ಲೇ ಕೋಟ್ಯಾಂತರ ಹಣವನ್ನು ವೆಚ್ಚ ಮಾಡಿದೆ ಎಂದು ಆರೋಪಿಸಿದ್ದಾರೆ.

ರಾಹುಲ್ ಅವರ ವಿರುದ್ಧ ಅಪಪ್ರಚಾರ ಮಾಡಲಾತ್ತಿದೆ. ಆದರೆ ಅವರು ತಮ್ಮ ದೃಢತೆ, ಕರುಣೆ, ಅವಿರತ ಪರಿಶ್ರಮದ ಮೂಲಕ ಜನರ ಮನಗೆದ್ದಿದ್ದಾರೆ. ರಾಹುಲ್ ಗಾಂಧಿಯಲ್ಲಿ ಇದ್ದಂತಹಉತ್ಸಾಹ, ವಿಶ್ವಾಸವೇ ಇತ್ತೀಚೆಗೆ ನಡೆದಿದ್ದರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸಗಡದವಿಧಾನಸಭಾ ಚುನಾವಣೆಯಲ್ಲಿಜಯಭೇರಿ ಬಾರಿಸಲು ಮುಖ್ಯ ಕಾರಣ ಎಂದರು.

2014ರಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶೇ 69ರಷ್ಟು ಮತದಾರರು ಬೆಂಬಲ ಸೂಚಿಸಿರಲಿಲ್ಲ.ಪ್ರಜಾಪ್ರಭುತ್ವವು ಯಾವಾಗಲೂ ಪ್ರಜಾ ಕೇಂದ್ರಿತವಾದುದೇ ಹೊರತು ವ್ಯಕ್ತಿ ಕೇಂದ್ರಿತವಲ್ಲ. ನಮಗೆ ಸರ್ವಾಧಿಕಾರ ಆಡಳಿತದ ಅವಶ್ಯಕತೆ ಇಲ್ಲ. ಬಿಜೆಪಿಯನ್ನು ದೇವರಂತೆ ಬಿಂಬಿಸಲಾಗುತ್ತಿದೆ. ನಮಗೆ ಇಂತಹ ಸಂಸ್ಕೃತಿ ಬೇಕಾಗಿಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಅಧಿಕಾರದ ಗದ್ದುಗೆ ಏರುವುದು ಕನಸಿನ ಮಾತು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT