ಮಧ್ಯಪ್ರದೇಶದಲ್ಲಿ ರಾಹುಲ್‌ ರೋಡ್‌ ಶೋ; ‘ನರ್ಮದಾ ಭಕ್ತ’ ಪೋಸ್ಟರ್‌ಗಳ ಮೂಲಕ ಸ್ವಾಗತ

7

ಮಧ್ಯಪ್ರದೇಶದಲ್ಲಿ ರಾಹುಲ್‌ ರೋಡ್‌ ಶೋ; ‘ನರ್ಮದಾ ಭಕ್ತ’ ಪೋಸ್ಟರ್‌ಗಳ ಮೂಲಕ ಸ್ವಾಗತ

Published:
Updated:

ಜಬಲ್ಪು‌ರ್‌: ಮಧ್ಯಪ್ರದೇಶದ ಜನತೆ ಅತ್ಯಂತ ಭಕ್ತಿಯಿಂದ ಪೂಜಿಸುವ ನರ್ಮದಾ ನದಿಗೆ ಗೌರವ ಸಲ್ಲಿಸುವ ಮೂಲಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಶನಿವಾರ ರೋಡ್‌ ಶೋಗೆ ಚಾಲನೆ ನೀಡಿದರು.

ಜಬಲ್ಪು‌ರ್‌ ಜಿಲ್ಲೆಯಲ್ಲಿ 8 ಕಿಲೋ ಮೀಟರ್‌ ರೋಡ್‌ ಶೋ ಆರಂಭಿಸಿದ ರಾಹುಲ್‌ ಅವರನ್ನು ಬೆಂಬಲಿಗರು ದಾರಿಯುದ್ದಕ್ಕೂ ‘ನರ್ಮದಾ ಭಕ್ತ’ ಎನ್ನುವ ಪೋಸ್ಟರ್‌ಗಳನ್ನು ಅಂಟಿಸಿ ಸ್ವಾಗತಿಸಿದರು.

ದುಮ್ನಾ ವಿಮಾನ ನಿಲ್ದಾಣದಿಂದ ನರ್ಮದಾ ನದಿ ದಂಡೆ ‘ಉಮಾ ಘಾಟ್‌’ಗೆ ವಿಮಾನದಲ್ಲಿ ಬಂದಿಳಿದ ರಾಹುಲ್‌ ಅವರಿಗೆ ಕಾಂಗ್ರೆಸ್‌ ಕಾರ್ಯಕರ್ತರು ‘ಜೈ ನರ್ಮದೆ’ ಎನ್ನುವ ಘೋಷಣೆಗಳ ಮಧ್ಯೆ ಪೂಜೆ ಮತ್ತು ಆರತಿ ಮಾಡಿದರು. ವೇದಿಕೆಯಲ್ಲಿದ್ದ ಬಾಲಕಿಯೊಬ್ಬಳಿಗೆ ಕಾಣಿಕೆಯೊಂದನ್ನು ಇದೇ ಸಂದರ್ಭದಲ್ಲಿ ನೀಡಿದರು. ಕಾರ್ಯಕರ್ತರೊಬ್ಬರು ಹಳದಿ ಲಕೋಟೆಯೊಂದನ್ನು ಸಹ ಬಾಲಕಿಗೆ ನೀಡಿದರು.

ಬಳಿಕ, ಅಬ್ದುಲ್‌ ಹಮೀದ್‌ ಚೌಕ್‌ನಿಂದ ರೋಡ್‌ ಶೋ ಆರಂಭಿಸಿದರು. ಮೂರು ವಿಧಾನಸಭಾ ಕ್ಷೇತ್ರಗಳಾದ ಜಬಲ್ಪು‌ರ್‌ ಪಶ್ಚಿಮ, ಜಬಲ್ಪು‌ರ್‌ ಉತ್ತರ ಮಧ್ಯ ಹಾಗೂ ಜಬಲ್ಪು‌ರ್‌ ಪೂರ್ವ ವಿಧಾನಸಭಾ ಕ್ಷೇತ್ರಗಳಲ್ಲಿ ರೋಡ್‌ ಶೋ ನಡೆಯಲಿದೆ. ಪ್ರಸ್ತುತ ಈ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಇನ್ನೊಂದು ಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ.

ಮಾನಸ ಸರೋವರ ಯಾತ್ರೆಯಿಂದ ಹಿಂತಿರುಗಿದ ಬಳಿಕ ಮಧ್ಯಪ್ರದೇಶದಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದಾಗ ರಾಹುಲ್‌ ಅವರನ್ನು ‘ಶಿವ ಭಕ್ತ’ ಎಂದು ಬಿಂಬಿಸಲಾಗಿತ್ತು. ಸತ್ನಾ ಮತ್ತು ರೆವಾ ಜಿಲ್ಲೆಗಳಿಗೆ ಭೇಟಿ ನೀಡಿದ ಬಳಿಕ ‘ರಾಮ ಭಕ್ತ ರಾಹುಲ್‌’ ಎಂದು ಘೋಷಣೆಗಳನ್ನು ಕೂಗಲಾಗಿತ್ತು.

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !