ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್‌ ’ನಾಚಿಕೆಗೆಟ್ಟ ಸುಳ್ಳುಗಾರ‘: ವಿಜಯ್‌ ರೂಪಾನಿ ಟೀಕೆ

Last Updated 31 ಡಿಸೆಂಬರ್ 2018, 11:22 IST
ಅಕ್ಷರ ಗಾತ್ರ

ಅಹಮದಾಬಾದ್‌: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಒಬ್ಬ ’ನಾಚಿಕೆಗೆಟ್ಟ ಸುಳ್ಳುಗಾರ‘ ಎಂದು ಟೀಕಿಸಿರುವ ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರೂಪಾನಿ, ರಾಜ್ಯ ರಾಜಕೀಯದಲ್ಲಿ ಕಾಂಗ್ರೆಸ್‌ ನಿರಂತರ ವೈಫಲ್ಯವಾಗುತ್ತಿರುವುದರಿಂದ ಅವರು ಹತಾಶರಾಗಿದ್ದಾರೆ ಎಂದು ತಿಳಿಸಿದ್ದಾರೆ.

’ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯುತ್ತಿರುವ2019ರ ವೈಬ್ರೆಂಟ್‌ ಗುಜರಾತ್‌ ಶೃಂಗಸಭೆಯಲ್ಲಿ ಸಿನಿಕತನದ ಪ್ರಾಯೋಜಕರು ದೀರ್ಘಕಾಲದಲ್ಲಿ ಸಹಭಾಗಿಗಳು ಆಗುತ್ತಿಲ್ಲ,ಅವರು ಈಗಾಗಲೇ ವೇದಿಕೆಯಿಂದ ಕೆಳಗಿಳಿದಿದ್ದಾರೆ. ಈ ಸಮಾವೇಶವೂ ಆಡಂಬರಕ್ಕಷ್ಟೇ ಸೀಮಿತವಾಗಿದೆ.ವಾಣಿಜ್ಯಾತ್ಮಕ ಫಲಿತಾಂಶ ತೃಪ್ತಿದಾಯಕವಾಗಿಲ್ಲ‘ ಎಂದು ಟ್ವೀಟ್‌ ಮೂಲಕ ರಾಹುಲ್‌ ಗಾಂಧಿ ಟೀಕಿಸಿದ್ದರು.

ಇದಕ್ಕೆ ಟ್ವಿಟರ್‌ನಲ್ಲೇ ತಿರುಗೇಟು ನೀಡಿರುವ ರೂಪಾನಿ, ’ಈ ಸಲದ ಶೃಂಗಸಭೆಯಲ್ಲಿ ಈ ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯ ಜನರು ಭಾಗವಹಿಸುತ್ತಿದ್ದಾರೆ. ಈ ಹಿಂದಿನ ಶೃಂಗಸಭೆಯಲ್ಲಿ 10 ರಾಷ್ಟ್ರಗಳು ಸಹಭಾಗಿತ್ವ ಹೊಂದಿದ್ದವು. ಈ ಸಲ 16 ರಾಷ್ಟ್ರಗಳು ಸಹಭಾಗಿತ್ವ ಹೊಂದಲು ಮುಂದೆ ಬಂದಿವೆ‘ ಎಂದು ಅಂಕಿಅಂಶ ಸಮೇತ ವಿವರಿಸಿದ್ದಾರೆ.

’ವೈಬ್ರೆಂಟ್‌ ಗುಜರಾತ್‌‘ನ 9 ನೇ ಸರಣಿಯು, ಇದೇ ಜನವರಿ 18ರಿಂದ 20ರ ತನಕ ಗಾಂಧಿನಗರದಲ್ಲಿ ನಡೆಯಲಿದೆ. ಭಾರತದಲ್ಲಿ ಹೂಡಿಕೆದಾರರಿಗೆ ಅತ್ಯುತ್ತಮ ತಾಣ ಗುಜರಾತ್‌ ಎಂದು ಬಿಂಬಿಸಲು ಈ ಶೃಂಗಸಭೆ ಆಯೋಜಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT