ಅಮೇಠಿ ಜನರಿಗೆ ರಾಹುಲ್ ಪತ್ರ

ಶುಕ್ರವಾರ, ಮೇ 24, 2019
29 °C

ಅಮೇಠಿ ಜನರಿಗೆ ರಾಹುಲ್ ಪತ್ರ

Published:
Updated:

ಲಖನೌ: ‘ಅಮೇಠಿ ಜನರು ನನ್ನ ಕುಟುಂಬದ ಸದಸ್ಯರು’ ಎಂಬ ಒಕ್ಕಣೆ ಇರುವ ಬಹಿರಂಗ ಪತ್ರವನ್ನು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಅವರು ಅಮೇಠಿ ಜನರಿಗೆ ಬರೆದಿದ್ದಾರೆ.

ಅಮೇಠಿ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿದಿರುವ ರಾಹುಲ್ ಅವರಿಗೆ ಬಿಜೆಪಿಯ ಸ್ಮೃತಿ ಇರಾನಿ ಅವರು ಕಠಿಣ ಪೈಪೋಟಿ ನೀಡಲಿದ್ದಾರೆ ಎಂದು ಮೂಲಗಳು ಹೇಳಿವೆ. ಕ್ಷೇತ್ರದಲ್ಲಿ ಇದೇ 6ರಂದು ಮತದಾನ ನಡೆಯಲಿದೆ. ಮತದಾನಕ್ಕೆ ಮೂರು ದಿನ ಉಳಿದಿರುವಾಗ ಕ್ಷೇತ್ರದ ಜನರನ್ನು ಉದ್ದೇಶಿಸಿ ರಾಹುಲ್ ಗಾಂಧಿ ಈ ಪತ್ರ ಬರೆದಿದ್ದಾರೆ.

‘ಸತ್ಯದ ಪರವಾಗಿ ನಿಲ್ಲುವ, ಜನರ ಸಮಸ್ಯೆಗಳಿಗೆ ಕಿವಿಯಾಗುವ ಮತ್ತು ಅವುಗಳ ಬಗ್ಗೆ ದನಿಯೆತ್ತುವ ಸಾಮರ್ಥ್ಯವನ್ನು ಅಮೇಠಿ ನನಗೆ ನೀಡಿದೆ, ಮುಂದೆಯೂ ನೀಡುತ್ತದೆ. ಬಿಜೆಪಿ ಸುಳ್ಳುಗಳನ್ನು ಹೆಣೆಯಲು ಆರಂಭಿಸಿದೆ ಎಂಬುದು ಅಮೇಠಿಯ ಜನರಿಗೆ ಗೊತ್ತಿದೆ. ಆ ಸುಳ್ಳುಗಳಿಗಾಗಿ ಅವರು (ಬಿಜೆಪಿ) ಭಾರಿ ಪ್ರಮಾಣದಲ್ಲಿ ಹಣ ಖರ್ಚು ಮಾಡುತ್ತಿದ್ದಾರೆ. ಆದರೆ ಸತ್ಯವಂತಿಕೆ ಮತ್ತು ಸ್ವಾಭಿಮಾನದಲ್ಲಿ ಅಮೇಠಿ ಜನರ ಸಾಮರ್ಥ್ಯ ಅಡಗಿದೆ ಎಂಬುದು ಬಿಜೆಪಿಗೆ ಗೊತ್ತಿಲ್ಲ’ ಎಂದು ಅವರು ಹೇಳಿದ್ದಾರೆ.

‘ಈ ಚುನಾವಣೆಯಲ್ಲಿ ಇಡೀ ದೇಶವನ್ನು ಒಗ್ಗೂಡಿಸಬೇಕಿದೆ. ಪೂರ್ವ–ಪಶ್ಚಿಮ ಮತ್ತು ಉತ್ತರ–ದಕ್ಷಿಣವನ್ನು ಒಂದು ಮಾಡಬೇಕಿದೆ. ಹೀಗಾಗಿಯೇ ನಾನು ವಯನಾಡ್‌ನಿಂದಲೂ ಸ್ಪರ್ಧಿಸಿದ್ದೇನೆ’ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 10

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !