ಸೋಮವಾರ, ಅಕ್ಟೋಬರ್ 21, 2019
23 °C

ರಾಹುಲ್ ‘ಆಧ್ಯಾತ್ಮಿಕ ಪ್ರವಾಸ’ಕ್ಕೆ ಬಿಜೆಪಿ ವ್ಯಂಗ್ಯ

Published:
Updated:
Prajavani

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಹಾರಾಷ್ಟ್ರ ಹಾಗೂ ಹರಿಯಾಣ ವಿಧಾನಸಭಾ ಚುನಾವಣೆಯ ಹೊತ್ತಿನಲ್ಲಿ ವಿದೇಶ ಪ್ರವಾಸ ಕೈಗೊಂಡಿರುವುದನ್ನು ಬಿಜೆಪಿ ವ್ಯಂಗ್ಯ ಮಾಡಿದೆ. 

ಲೋಕಸಭಾ ಚುನಾವಣೆ ಸೋಲಿನ ಬಳಿಕ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದ ರಾಹುಲ್, ಬ್ಯಾಂಕಾಕ್‌ಗೆ ತೆರಳಿದ್ದು ಅಲ್ಲಿಂದ ಕಾಂಬೋಡಿಯಾದ ಅಧ್ಯಾತ್ಮ ಕೇಂದ್ರದಲ್ಲಿ ವಿಪಶ್ಶನ ಧ್ಯಾನ ಮಾಡಲಿದ್ದಾರೆ. ಆ ಬಳಿಕ ಚುನಾವಣಾ ಪ್ರಚಾರಕ್ಕೆ ವಾಪಸಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 

‘ತಾರಾ ಪ್ರಚಾರಕನ ಭಾಷಣ ಕೇಳಲು ಮತದಾರರು ಕಾತುರದಿಂದ ಕಾಯುತ್ತಿದ್ದಾರೆ. ಅವರು ವಿದೇಶಕ್ಕೆ ತೆರಳಿರುವುದು ನಿಜವೇ?‘ ಎಂದು ಕರ್ನಾಟಕದ ಬಿಜೆಪಿ ಘಟಕ ಟ್ವೀಟ್‌ನಲ್ಲಿ ಲೇವಡಿ ಮಾಡಿದೆ. 

‘ಸಾರ್ವಜನಿಕ ಹಾಗೂ ಖಾಸಗಿ ಬದುಕನ್ನು ಮಿಶ್ರಣ ಮಾಡುವುದು ಸರಿಯಲ್ಲ. ಪ್ರತಿಯೊಬ್ಬರ ಖಾಸಗಿ ಜೀವನವನ್ನು ಗೌರವಿಸಬೇಕು’ ಎಂದು ಕಾಂಗ್ರೆಸ್ ಮುಖಂಡ ಅಭಿಷೇಕ್ ಸಿಂಘ್ವಿ ಬಿಜೆಪಿಗೆ ಸಲಹೆ ನೀಡಿದ್ದಾರೆ. 

‘ಕೇದಾರನಾಥ ಗುಹೆಯಲ್ಲಿ ಧ್ಯಾನ ಮಾಡುವುದು ಕೆಲವು ಮಾಧ್ಯಮಗಳಿಗೆ ಅದ್ಭುತ ವಿಷಯ ಎನಿಸಿದರೆ, ವ್ಯಕ್ತಿಯೊಬ್ಬರು ಖಾಸಗಿಯಾಗಿ ‘ಅಧ್ಯಾತ್ಮ ಪ್ರವಾಸ’ಕ್ಕೆ ತೆರಳುವುದು ಅಪರಾಧವಾಗಿ ತೋರುತ್ತದೆ’ ಎಂದು ಕಾಂಗ್ರೆಸ್ ಮುಖಂಡ ಗೌರವ್ ಗೊಗೊಯಿ ಅವರು ಮಾಧ್ಯಮಗಳ ಪಕ್ಷಪಾತ ಧೋರಣೆಯನ್ನು ಖಂಡಿಸಿದ್ದಾರೆ. 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)