ರೈಲು ನಿಲ್ದಾಣದಲ್ಲಿ ದೂರವಾಣಿ ಬೂತ್‌ಗಳು ಮೂಲೆಗೆ

7
ಅಗತ್ಯ ಪಟ್ಟಿಯಿಂದ ತೆಗೆದುಹಾಕಿದ ರೈಲ್ವೆ ಇಲಾಖೆ

ರೈಲು ನಿಲ್ದಾಣದಲ್ಲಿ ದೂರವಾಣಿ ಬೂತ್‌ಗಳು ಮೂಲೆಗೆ

Published:
Updated:
ಸಾಂದರ್ಭಿಕ ಚಿತ್ರ

ನವದೆಹಲಿ: ಮೊಬೈಲ್ ಫೋನ್‌ಗಳು ತಮ್ಮ ವ್ಯಾಪ್ತಿ ಹೆಚ್ಚಿಸಿಕೊಳ್ಳುತ್ತಿರುವ ಈ ಸಮಯದಲ್ಲಿ ರೈಲ್ವೆ ನಿಲ್ದಾಣಗಳಲ್ಲಿ ದಶಕಗಳಿಂದ ಬಳಕೆಯಾಗುತ್ತಿದ್ದ ಸಾರ್ವಜನಿಕ ದೂರವಾಣಿ ಬೂತ್‌ಗಳು ತೆರೆಮರೆಗೆ ಸರಿಯುವ ಕಾಲ ಬಂದಿದೆ. ಇವು ರೈಲ್ವೆ ಇಲಾಖೆಯ ‘ಅಗತ್ಯ ಸೌಲಭ್ಯ’ಗಳ ಪಟ್ಟಿಯಲ್ಲಿ ಸ್ಥಾನ ಕಳೆದುಕೊಳ್ಳಲಿವೆ. ಮೊಬೈಲ್ ಚಾರ್ಜಿಂಗ್ ವ್ಯವಸ್ಥೆ, ಕೀಟ ಓಡಿಸುವ ಯಂತ್ರಗಳು (ಫ್ಲೈ ಕ್ಯಾಚಿಂಗ್ ಮಷಿನ್) ಹಾಗೂ ಶುಶ್ರೂಷ ಕೇಂದ್ರಗಳು ಈ ಪಟ್ಟಿಗೆ ಸೇರ್ಪಡೆಯಾಗಲಿವೆ.

ಸಂಚಾರ ದಟ್ಟಣೆ ಹಾಗೂ ಅದಾಯವನ್ನು ಪರಿಗಣಿಸಿ ವಿವಿಧ ಶ್ರೇಣಿಯ ನಿಲ್ದಾಣಗಳಿಗೆ ಪರಿಷ್ಕೃತ ಪಟ್ಟಿ ಕಳುಹಿಸಲಾಗಿದೆ. 

ಮನೆಯಲ್ಲಿ ಸ್ಥಿರ ದೂರವಾಣಿ ಅಥವಾ ಮೊಬೈಲ್ ಇಲ್ಲದ ಸಮಯದಿಂದ ಸಾವರ್ಜನಿಕ ದೂರವಾಣಿ ಕೇಂದ್ರಗಳು ಹೆಚ್ಚಾಗಿ ಬಳಕೆಯಾಗುತ್ತಿದ್ದವು. ಇಂತಹ ಬಹುತೇಕ ಕೇಂದ್ರಗಳು ಸ್ಥಗಿತಗೊಂಡಿವೆ, ಇಲ್ಲವೇ ವ್ಯಾಪಾರದ ಅಂಗಡಿಗಳಾಗಿ ಪರಿವರ್ತನೆಯಾಗಿವೆ.  

ಮೊಬೈಲ್ ಫೋನ್ ಬರುವುದಕ್ಕೂ ಮುನ್ನ ಇವು ಮಹತ್ವದ ಪಾತ್ರ ವಹಿಸಿದ್ದವು. ಊರಿಗೆ ಹೋಗುವ ಅಥವಾ ಬರುವ ಮಾಹಿತಿಯನ್ನು ಹಂಚಿಕೊಳ್ಳಲು ಪ್ರಯಾಣಿಕರು ಇವುಗಳನ್ನು ಉಪಯೋಗಿಸುತ್ತಿದ್ದರು. ತುರ್ತು ಸೇವೆ ಎಂಬರ್ಥದಲ್ಲೂ ಬಳಕೆಯಲ್ಲಿದ್ದವು. ತಂತ್ರಜ್ಞಾನ ಅಭಿವೃದ್ಧಿಯಾದ ಕಾರಣ ಇವು ಮೂಲೆಗೆ ಸೇರಿವೆ ಎಂದು ನಿಲ್ದಾಣದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು. 

‘ಎ’ ದರ್ಜೆಯ ನಿಲ್ದಾಣಗಳಲ್ಲಿ ಪ್ರತಿ ಪ್ಲಾಟ್‌ಫಾರ್ಮ್‌ನಲ್ಲೂ ಎಸ್‌ಟಿಡಿ/ಐಎಸ್‌ಡಿ/ಫ್ಯಾಕ್ಸ್ ಸೌಲಭ್ಯ ಇರುವ ಕನಿಷ್ಠ ಎರಡು ಬೂತ್‌ಗಳು ಕಡ್ಡಾಯ. ‘ಬಿ’ ಮತ್ತು ‘ಸಿ’ ದರ್ಜೆಯ ನಿಲ್ದಾಣಗಳ ಪ್ರತಿ ಪ್ಲಾಟ್‌ಫಾರ್ಮ್‌ನಲ್ಲೂ ಒಂದು ಬೂತ್. ‘ಡಿ’ ದರ್ಜೆಯ ಪ್ರತಿ ನಿಲ್ದಾಣಗಳಿಗೆ ಎರಡು ದೂರವಾಣಿಗಳು ಮತ್ತು ‘ಇ’, ‘ಎಫ್‌’ ದರ್ಜೆಯ ನಿಲ್ದಾಣಗಳಲ್ಲಿ ಒಂದು ಬೂತ್ ಇರಬೇಕು ಎಂಬ ನಿಯಮ ರೈಲ್ವೆ ಇಲಾಖೆಯಲ್ಲಿ ಇತ್ತು. ಟೆಲಿಫೋನ್ ಬೂತ್‌ಗಳು ಕೇವಲ ರೈಲ್ವೆ ನಿಲ್ದಾಣ ಮಾತ್ರವಲ್ಲದೇ ಎಲ್ಲಡೆಯೂ ಅಸ್ತಿತ್ವ ಕಳೆದುಕೊಳ್ಳುತ್ತಿವೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !