ಗುರುವಾರ , ಆಗಸ್ಟ್ 5, 2021
27 °C

ನಾಲ್ಕು ರಾಜ್ಯಗಳಿಗೆ 204 ಐಸೊಲೇಷನ್‌ ಬೋಗಿ ರವಾನೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದೆಹಲಿ ಸೇರಿದಂತೆ ಉತ್ತರ ಪ್ರದೇಶ, ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ 204 ಐಸೊಲೇಷನ್‌ ಬೋಗಿಗಳನ್ನು ರವಾನೆ ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. 

ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಐಸೊಲೇಷನ್‌ ಬೋಗಿಗಳನ್ನು ನೀಡುವಂತೆ ಈ ರಾಜ್ಯಗಳು ಮನವಿ ಮಾಡಿದ್ದವು. ಉತ್ತರ ಪ್ರದೇಶಕ್ಕೆ 70, ದೆಹಲಿಗೆ 54, ತೆಲಂಗಾಣಕ್ಕೆ 60 ಹಾಗೂ ಆಂಧ್ರಪ್ರದೇಶಕ್ಕೆ 20 ಬೋಗಿಗಳನ್ನು ರವಾನೆ ಮಾಡಲಾಗಿದೆ. ಉತ್ತರ ಪ್ರದೇಶ ಸರ್ಕಾರವು 240 ಬೋಗಿಗಳಿಗೆ ಬೇಡಿಕೆ ಇರಿಸಿದೆ ಎಂದು ಅಧಿಕಾರಿಗಳು ತಿಳಿಸಿದರು. 

ಸೋಂಕಿತರ ಚಿಕಿತ್ಸೆಗಾಗಿ ರೈಲ್ವೆ ಇಲಾಖೆಯು 5,321 ಬೋಗಿಗಳನ್ನು ಐಸೊಲೇಷನ್‌ ವಾರ್ಡ್‌ಗಳಾಗಿ ಪರಿವರ್ತಿಸಿತ್ತು. ಶ್ರಮಿಕ ರೈಲುಗಳಿಗೆ ಬೋಗಿಗಳ ಬೇಡಿಕೆ ಹೆಚ್ಚಿದ ಸಂದರ್ಭದಲ್ಲಿ ಹಲವು ಬೋಗಿಗಳನ್ನು ಸಾಮಾನ್ಯ ಬೋಗಿಗಳಾಗಿ ಮತ್ತೆ ಪರಿವರ್ತಿಸಲಾಗಿತ್ತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.