ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನು ರೈಲುಗಳಲ್ಲಿಯೂ ಬ್ಲ್ಯಾಕ್‌ಬಾಕ್ಸ್‌

Last Updated 15 ಅಕ್ಟೋಬರ್ 2018, 19:12 IST
ಅಕ್ಷರ ಗಾತ್ರ

ನವದೆಹಲಿ: ರೈಲು ಅಪಘಾತಗಳಿಗೆ ಕಾರಣ ಪತ್ತೆ ಮಾಡಲು ನೆರವಾಗಲು ವಿಮಾನಗಳಲ್ಲಿ ಇರುವಂತೆಯೇ ಬ್ಲ್ಯಾಕ್‌ಬಾಕ್ಸ್ ಅಳವಡಿಸಲು ರೈಲ್ವೆ ಇಲಾಖೆ ಚಿಂತನೆ ನಡೆಸಿದೆ.

ಎಂಜಿನ್‌ ಕ್ಯಾಬಿನ್‌ನಲ್ಲಿ ಧ್ವನಿ ಮುದ್ರಿಕೆ (ಎಲ್‌ಸಿವಿಆರ್)ಉಪಕರಣ ಅಭಿವೃದ್ಧಿ ಹಂತದಲ್ಲಿದೆ. ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾದ ಬಳಿಕ ಈ ವಸ್ಥೆಯನ್ನುಅಳವಡಿಸಲಾಗುತ್ತದೆ ಎಂದು ಇಲಾಖೆ ಅಧಿಕಾರಿ ತಿಳಿಸಿದ್ದಾರೆ.

ಕ್ಯಾಬಿನ್‌ನಲ್ಲಿ ಅಳವಡಿಸಲಾಗುವ ಈ ಉಪಕರಣ, ವಿಡಿಯೊ ಆಡಿಯೊ ದಾಖಲಿಸಿಕೊಳ್ಳುತ್ತದೆ. ರೈಲು ಸಂಚಾರದ ಹಲವು ಆಯಾಮಗಳ ಮೇಲೂ ಬ್ಲ್ಯಾಕ್‌ ಬಾಕ್ಸ್ ನಿಗಾ ವಹಿಸುತ್ತದೆ. ಎಂಜಿನ್ ಸಹಜವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದಾದಲ್ಲಿ ಈ ಕುರಿತು ಚಾಲಕರಿಗೆ ಎಚ್ಚರಿಕೆ ನೀಡುತ್ತದೆ. ವೈರ್‌, ಕೇಬಲ್‌ಗಳು, ಕನೆಕ್ಟರ್‌ಗಳ ತಾಪಮಾನದ ಮೇಲೂ ಇವು ಕಣ್ಣಿಡುತ್ತವೆ. ಸಿಬ್ಬಂದಿ ಕರ್ತವ್ಯ ನಿರ್ವಹಿಸುವ ರೀತಿ,ಎಂಜಿನ್ ನಿರ್ವಹಣೆಯಲ್ಲಿನ ಸಮಸ್ಯೆ,ಮನುಷ್ಯರು ಎಸಗುವ ತಪ್ಪುಗಳನ್ನು ಸಹ ಇವು ಗುರುತಿಸುತ್ತವೆ ಎಂದು ಅವರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT