ರೈಲ್ವೆ ಲೋಕೊ ಪೈಲಟ್‌, ತಂತ್ರಜ್ಞರ ಹುದ್ದೆ; 60 ಸಾವಿರಕ್ಕೆ ಏರಿಕೆ

6

ರೈಲ್ವೆ ಲೋಕೊ ಪೈಲಟ್‌, ತಂತ್ರಜ್ಞರ ಹುದ್ದೆ; 60 ಸಾವಿರಕ್ಕೆ ಏರಿಕೆ

Published:
Updated:
Deccan Herald

ನವದೆಹಲಿ: ಸಹಾಯಕ ಲೋಕೊ ಪೈಲಟ್‌ ಮತ್ತು ತಂತ್ರಜ್ಞರ ಹುದ್ದೆಗಳ ಭರ್ತಿಗಾಗಿ ರೈಲ್ವೆ ಇಲಾಖೆ ಆಗಸ್ಟ್‌ 9ರಂದು ಕಂಪ್ಯೂಟರ್‌ ಆಧಾರಿತ ಪರೀಕ್ಷೆ ನಡೆಸುತ್ತಿದ್ದು, 60 ಸಾವಿರ ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ ಎಂದು ಗುರುವಾರ ರೈಲ್ವೆ ಸಚಿವ ಪೀಯೂಷ್‌ ಗೋಯಲ್‌ ಹೇಳಿದ್ದಾರೆ. 

ಇದೇ ಮೊದಲ ಬಾರಿ ರೈಲ್ವೆ ಇಲಾಖೆ ಕಂಪ್ಯೂಟರ್ ಆಧಾರಿತ ಪರೀಕ್ಞೆ ನಡೆಸುತ್ತಿದೆ. ಈ ಹುದ್ದೆಗಳಿಗೆ 47.56 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.

ಒಟ್ಟು 26,502 ಸಹಾಯಕ ಲೋಕೊ ಪೈಲಟ್‌ ಮತ್ತು ತಂತ್ರಜ್ಞರ ಹುದ್ದೆಗಳನ್ನು ಸರ್ಕಾರ ದುಪ್ಪಟ್ಟಿಗೂ ಹೆಚ್ಚು ಮಾಡಿದೆ. 60 ಸಾವಿರ ಹುದ್ದೆಗಳಿಗೆ ಸೂಕ್ತ ಅಭ್ಯರ್ಥಿಗಳ ಆಯ್ಕೆ ನಡೆಯುವುದಾಗಿ ಸಚಿವ ಗೋಯಲ್‌ ಟ್ವೀಟಿಸಿದ್ದಾರೆ. 

ಕಂಪ್ಯೂಟರ್‌ ಆಧಾರಿತ ಪರೀಕ್ಷೆ ಅಭ್ಯಾಸಕ್ಕಾಗಿ ಜುಲೈ 26ರಿಂದ ಮಾಕ್‌ ಲಿಂಕ್‌ ಕಾರ್ಯರಂಭಿಸಿದೆ ಹಾಗೂ ಇ–ಪ್ರವೇಶ ಪತ್ರವನ್ನು ರೈಲ್ವೆ ನೇಮಕಾತಿ ಅಧಿಕೃತ ವೆಬ್‌ಸೈಟ್‌ನಿಂದ ಪರೀಕ್ಷೆಗೆ ನಾಲ್ಕು ದಿನ ಮುಂಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಪರೀಕ್ಷೆಗೆ ಒಂದು ಗಂಟೆ ನಿಗದಿಯಾಗಿದ್ದು, 75 ಬಹುಮಾದರಿಯ ಪ್ರಶ್ನೆಗಳನ್ನು ಇದು ಒಳಗೊಂಡಿರುತ್ತದೆ. ತಪ್ಪು ಉತ್ತರಕ್ಕೆ ಮೂರನೇ ಒಂದರಷ್ಟು ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.

ಆರ್‌ಆರ್‌ಬಿ ವೆಬ್‌ಸೈಟ್‌: http://www.rrbbnc.gov.in/

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !