ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯಲ್ಲಿ ಆಲಿಕಲ್ಲು ಮಳೆ; ವಿಮಾನಗಳ ಸಂಚಾರ ಮಾರ್ಗ ಬದಲು

Last Updated 7 ಫೆಬ್ರುವರಿ 2019, 19:35 IST
ಅಕ್ಷರ ಗಾತ್ರ

ನವದೆಹಲಿ/ಶ್ರೀನಗರ: ಉತ್ತರ ಭಾರತದ ಹಲವೆಡೆ ಹಾಗೂದೆಹಲಿ ಸುತ್ತಮುತ್ತ ಗುರುವಾರ ಆಲಿಕಲ್ಲು ಮಳೆ ಸುರಿದಿದ್ದು, ಕೆಲವೆಡೆ ಹಿಮಪಾತವಾಗಿದೆ.

ಇದರಿಂದಾಗಿ, 9 ಅಂತರರಾಷ್ಟ್ರೀಯ ಮತ್ತು 23 ದೇಶಿ ವಿಮಾನಗಳ ಸಂಚಾರದ ಮಾರ್ಗಗಳನ್ನು ಸಮೀಪದ ಸ್ಥಳಗಳಿಗೆ ಬದಲಾಯಿಸಲಾಯಿತು.

‘ಸಂಜೆ 6ರಿಂದ 7 ಗಂಟೆ ಅವಧಿಯಲ್ಲಿ ವಿಮಾನಗಳ ಮಾರ್ಗಗಳನ್ನು ಬದಲಾಯಿಸಲಾಯಿತು.ಒಂಬತ್ತು ವಿಮಾನಗಳನ್ನು ಜೈಪುರ ವಿಮಾನ ನಿಲ್ದಾಣಕ್ಕೆ ಕಳುಹಿಸಲಾಯಿತು. ಇದೇ ವೇಳೆಯಲ್ಲಿ ತಲಾ ಮೂರು ವಿಮಾನಗಳಿಗೆ ಲಖನೌ ಮತ್ತು ಅಮೃತಸರ ವಿಮಾನ ನಿಲ್ದಾಣಕ್ಕೆ ತೆರಳುವಂತೆ ಸೂಚಿಸಲಾಯಿತು. ಎರಡು ವಿಮಾನಗಳನ್ನು ವಾರಾಣಾಸಿ ಮತ್ತು ಒಂದು ವಿಮಾನವನ್ನು ಇಂದೋರ್‌ಗೆ ಕಳುಹಿಸಲಾಯಿತು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನಿಂದ ದೆಹಲಿಗೆ ತೆರಳುತ್ತಿದ್ದ ‘ವಿಸ್ತಾರಾ ಏರ್‌ಲೈನ್ಸ್‌’ಗೆ ಸೇರಿದ ವಿಮಾನವನ್ನು ಲಖನೌಗೆ ಕಳುಹಿಸಲಾಯಿತು.

ಕಾಶ್ಮೀರದಲ್ಲಿ ಅಪಾರ ಪ್ರಮಾಣದಲ್ಲಿ ಸತತ ಎರಡನೇ ದಿನವೂ ಹಿಮಪಾತ ಸಂಭವಿಸಿದೆ. ಶ್ರೀನಗರ ವಿಮಾನ ನಿಲ್ದಾಣದಿಂದ ತೆರಳಬೇಕಾಗಿದ್ದ ಎಲ್ಲ ವಿಮಾನಗಳ ಸಂಚಾರವನ್ನು ರದ್ದುಪಡಿಸಲಾಗಿದೆ.

ಉತ್ತರಪ್ರದೇಶದಲ್ಲಿ ಸುರಿದ ಆಲಿಕಲ್ಲು ಮಳೆಯಿಂದ ಬೆಳೆಗಳಿಗೆ ಹಾನಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT