ಭಾನುವಾರ, ಸೆಪ್ಟೆಂಬರ್ 15, 2019
30 °C

ಉತ್ತರ ಭಾರತದಲ್ಲಿ ಮಹಾಮಳೆಗೆ 30 ಮಂದಿ ಸಾವು; 4 ರಾಜ್ಯಗಳಲ್ಲಿ ಪ್ರವಾಹ ಎಚ್ಚರಿಕೆ

Published:
Updated:

ನವದೆಹಲಿ: ಉತ್ತರ ಭಾರತದಲ್ಲಿನ ಮಹಾಮಳೆಗೆ ಕನಿಷ್ಠ 30 ಮಂದಿ ಸಾವಿಗೀಡಾಗಿದ್ದಾರೆ. ಅದೇ ವೇಳೆ  ದೆಹಲಿ, ಹರ್ಯಾಣ, ಪಂಜಾಬ್ ಮತ್ತು ಉತ್ತರ ಪ್ರದೇಶದಲ್ಲಿ ಪ್ರವಾಹ ಎಚ್ಚರಿಕೆ ನೀಡಲಾಗಿದೆ.

ಯಮುನಾ  ನದಿ ಸೇರಿದಂತೆ ಈ ರಾಜ್ಯಗಳಲ್ಲಿನ ನದಿ ಉಕ್ಕಿ ಹರಿಯುತ್ತಿದ್ದು ಜನರು ಜಾಗೃತರಾಗಿರುವಂತೆ  ಅಧಿಕಾರಿಗಳು ಹೇಳಿದ್ದಾರೆ.  ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಮಳೆಯಿಂದಾಗಿ ಭಾರೀ  ನಾಶ ನಷ್ಟವುಂಟಾಗಿದೆ. ಮಳೆಯಿಂದಾಗಿ ಭೂಕುಸಿತವುಂಟಾಗಿದ್ದು, ಹ್ರೈಡ್ರೊಪವರ್ ಯೋಜನೆಯನ್ನು ನಿಲ್ಲಿಸಿ ಜಲಾಶಯಗಳಿಂದ ನೀರು ಹೊರ ಹರಿಯಬಿಡಲಾಗಿದೆ.

ಭಾನುವಾರ ಸಂಜೆಯವರೆಗೆ ಲಭಿಸಿದ ಮಾಹಿತಿ ಪ್ರಕಾರ  ಮಳೆಯಿಂದಾಗಿ ಹಿಮಾಚಲ ಪ್ರದೇಶದಲ್ಲಿ 23 ಸಾವು ಮತ್ತು ಉತ್ತರಾಖಂಡದಲ್ಲಿ12 ಮಂದಿಗೆ ಗಾಯಗಳಾಗಿವೆ. ಪಂಜಾಬ್‌ನ ಅವೊಲ್ ಗ್ರಾಮಗಲ್ಲಿ  ಮನೆಯ ಛಾವಣಿ ಬಿದ್ದು ಒಂದೇ ಕುಟುಂಬದ ಮೂವರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ದೆಹಲಿ ಸರ್ಕಾರ ಭಾನುವಾರ ಪ್ರವಾಹ ಎಚ್ಚರಿಕೆ ನೀಡಿದ್ದು ಜನರು ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ವಿನಂತಿಸಿದೆ. ಯಮುನಾ ನದಿ ಅಪಾಯದ ಮಟ್ಟ (205. 33 ಮೀಟರ್) ದಾಟುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಭಾನುವಾರ ಸಂಜೆ ಹೊತ್ತಿಗೆ ಯಮುನಾ ನದಿ ಮಟ್ಟ  203.7 ಮೀಟರ್ ಆಗಿದ್ದು ಸೋಮವಾರ 207 ಮೀ ತಲುಪುವ  ಸಾಧ್ಯತೆ ಇದೆ ಎಂದು ಅಧಿಕಾರಿಗಳು  ಹೇಳಿದ್ದಾರೆ. ಹರ್ಯಾಣದ ಹಾಥಿನಿ ಕುಂಡ್ ಬ್ಯಾರೇಜ್‌ನಿಂದ ಭಾನುವಾರ ಸಂಜೆ 828,000 ಕ್ಯುಸೆಕ್ಸ್ ನೀರು ಹೊರ ಹರಿಯಬಿಡಲಾಗಿದೆ.

 ಕಳೆದ 24 ಗಂಟೆಗಳಲ್ಲಿ ಜಗತ್ತಿನ 15 ಅತೀ ಒದ್ದೆ ಪ್ರದೇಶಗಳ ಪೈಕಿ 13 ಪ್ರದೇಶಗಳು ಭಾರತದ್ದಾಗಿವೆ ಎಂದು ಜಾಗತಿಕ ಹವಾಮಾನ ಮೇಲ್ವಿಚಾರಣೆಯ ವೆಬ್‌ಸೈಟ್   El Dorado Weather ವರದಿ ಮಾಡಿದೆ.

ಕಳೆದ 36 ಗಂಟೆಗಳಲ್ಲಿ ಹಿಮಾಚಲ ಪ್ರದೇಶದಲ್ಲಿ ಕನಿಷ್ಠ 23 ಮಂದಿ ಸಾವಿಗೀಡಾಗಿದ್ದಾರೆ ಎಂದು ರಾಜ್ಯದ ಅಧಿಕಾರಿಗಳು ಭಾನುವಾರ ಹೇಳಿದ್ದಾರೆ . ಶಿಮ್ಲಾದಲ್ಲಿ ಕನಿಷ್ಠ  9 ಮಂದಿ ಸಾವಿಗೀಡಾಗಿದ್ದಾರೆ.

ಭಾರತೀಯ ಹವಾಮಾನ ಇಲಾಖೆ ಪ್ರಕಾರ ಹಿಮಾಚಲ  ಪ್ರದೇಶಗಲ್ಲಿ ಕಳೆದ 24 ಗಂಟೆಗಳಲ್ಲಿಅತೀ ಹೆಚ್ಚು ಮಳೆ ಲಭಿಸಿದೆ.
ಮಳೆಯಿಂದಾಗಿ ಭೂಕುಸಿತವುಂಟಾಗಿದ್ದು 13 ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ 887 ರಸ್ತೆಗಳು ಸಂಪೂರ್ಣ ಅಥವಾ  ಭಾಗಶಃ ರದ್ದಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಏತನ್ಮಧ್ಯೆ, ಉತ್ತರಾಖಂಡದಲ್ಲಿ 10 ಮಂದಿ ನಾಪತ್ತೆಯಾಗಿದ್ದು 15 ಮನೆಗಳಿಗೆ ಹಾನಿಯಾಗಿದೆ. 4 ಮಂದಿ ಸಾವಿಗೀಡಾಗಿದ್ದು 20 ಮಂದಿಯನ್ನು ರಕ್ಷಿಸಲಾಗಿದೆ ಎಂದು  ರಾಜ್ಯ ವಿಪತ್ತು ನಿರ್ವಹಣಾ ಅಧಿಕಾರಿಗಳು ಹೇಳಿಳಿದ್ದಾರೆ.

ಇದನ್ನೂಓದಿ:  ಹಿಮಾಚಲ ಪ್ರದೇಶ: ಭಾರಿ ಮಳೆಗೆ 22 ಸಾವು

Post Comments (+)