ಕೇರಳ: 3 ಜಿಲ್ಲೆಗಳಲ್ಲಿ ಮಾತ್ರ ರೆಡ್ ಅಲರ್ಟ್ 

7

ಕೇರಳ: 3 ಜಿಲ್ಲೆಗಳಲ್ಲಿ ಮಾತ್ರ ರೆಡ್ ಅಲರ್ಟ್ 

Published:
Updated:

ತಿರುವನಂತಪುರಂ: ಕೇರಳದಲ್ಲಿ ಮಳೆ ಸ್ವಲ್ಪ ಕಡಿಮೆಯಾಗಿದ್ದು ಪತ್ತನಂತಿಟ್ಟ, ಇಡುಕ್ಕಿ, ಎರ್ನಾಕುಳಂ ಜಿಲ್ಲೆಗಳಲ್ಲಿ ಮಾತ್ರ ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಹಿಂದೆ 11 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿತ್ತು. ಎಂಟು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಇದೆ. ಕೇರಳದಲ್ಲಿ ಶನಿವಾರ 33 ಮಂದಿ ಸಾವಿಗೀಡಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. 3446 ನಿರಾಶ್ರಿತರ ಶಿಬಿರಗಳಲ್ಲಿ ಆರೂವರೆ ಲಕ್ಷ ಮಂದಿಯಿದ್ದಾರೆ. ಅಧಿಕೃತ ಮಾಹಿತಿ ಪ್ರಕಾರ ಕಳೆದ 10 ದಿನಗಳಲ್ಲಿ 166 ಮಂದಿ ಸಾವಿಗೀಡಾಗಿದ್ದಾರೆ, 38 ಮಂದಿ ನಾಪತ್ತೆಯಾಗಿದ್ದಾರೆ.

ಬೇರೆ ರಾಜ್ಯಗಳಿಂದಲೂ ರಕ್ಷಣಾ ಕಾರ್ಯಗಳಿಗೆ ತಂಡಗಳು ಆಗಮಿಸಿವೆ.
ಆಲುವಾದಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಕೋಟ್ಟಯಂ- ಎರ್ನಾಕುಳಂ ರೈಲ್ವೆ ಸಂಚಾರ ಪುನರಾರಂಭವಾಗಿದೆ. ಪತ್ತನಂತಿಟ್ಟ, ಎರ್ನಾಕುಳಂನಲ್ಲಿ ಜನರು ಸಾವಿಗೀಡಾಗಿದ್ದಾರೆ ಎಂಬ ಸುದ್ದಿಯಿದ್ದರೂ ಖಚಿತ ಮಾಹಿತಿ ಲಭಿಸಿಲ್ಲ. ಪತ್ತನಂತಿಟ್ಟ ರಾಣ್ಣಿ ಪ್ರದೇಶದಲ್ಲಿ ಜನರನ್ನು ಸ್ಥಳಾಂತರಿಸಲಾಗಿದೆ. ಪಂದಳಂ ಸಹಜ ಸ್ಥಿತಿಗೆ ಮರಳಿಲ್ಲ,   
ಚೆಂಗನ್ನೂರು, ಚಾಲಕ್ಕುಡಿಯಲ್ಲಿ ರಕ್ಷಣಾ ಕಾರ್ಯಗಳು ಬಿರುಸಿನಿಂದ ಸಾಗಿವೆ. ಪೆರಿಯಾರ್ ನದಿಯಲ್ಲಿ ಪ್ರವಾಹದ ತೀವ್ರತೆ ಕಡಿಮೆಯಾಗಿದೆ.  ತಿರುವನಂತಪುರಂನಿಂದ ಎರ್ನಾಕುಳಂ ಜಿಲ್ಲೆಯವರೆಗೆ ಗಾಳಿ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !