ಮಂಗಳವಾರ, ಆಗಸ್ಟ್ 11, 2020
27 °C

‘ರಾಜ್‌ ಮದುವೆ ಮನೆಯ ನೃತ್ಯಗಾರ’

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ‘ಮಹಾರಾಷ್ಟ್ರ ನವನಿರ್ಮಾಣ ಸೇನಾದ (ಎಂಎನ್‌ಎಸ್‌) ಮುಖ್ಯಸ್ಥ ರಾಜ್‌ ಠಾಕ್ರೆ, ಮದುವೆ ಮನೆಯಲ್ಲಿ ನೃತ್ಯ ಮಾಡುವ ವ್ಯಕ್ತಿ’ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್‌ ಟೀಕಿಸಿದ್ದಾರೆ.

ಶುಕ್ರವಾರ ರ್‍ಯಾಲಿಯೊಂದರಲ್ಲಿ ಫಡಣವಿಸ್‌ ಹಾಗೂ ಮೋದಿ ಅವರನ್ನು ಟೀಕಿಸಿದ್ದ ರಾಜ್‌ ಠಾಕ್ರೆ, ‘ಮಹಾರಾಷ್ಟ್ರದ ಜನರು ನೀರಿಲ್ಲದೆ ತತ್ತರಿಸುತ್ತಿದ್ದರೆ, ಫಡಣವಿಸ್‌ ಅವರು ಗೋದಾವರಿ ನದಿಯ ನೀರನ್ನು ಗುಜರಾತ್‌ಗೆ ಹರಿಸಿದ್ದಾರೆ. ಅವರೊಬ್ಬ ಸ್ಥಾಪಿತ ಮುಖ್ಯಮಂತ್ರಿ’ ಎಂದು ಟೀಕಿಸಿದ್ದರು.

ಶನಿವಾರ ಇದಕ್ಕೆ ಪ್ರತ್ಯುತ್ತರ ನೀಡಿದ ಫಡಣವಿಸ್‌, ‘ರಾಜ್‌ ಠಾಕ್ರೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಆದ್ದರಿಂದ ಬೇಕುಬೇಕಾದಂತೆ ಆಧಾರರಹಿತ ಟೀಕೆಗಳನ್ನು ಮಾಡಬಹುದು. ‘ಸ್ಥಾಪಿತ ಮುಖ್ಯಮಂತ್ರಿ’ ಎಂದು ನನ್ನನ್ನು ಟೀಕಿಸಿದ್ದಾರೆ. ನಿಜ, ನಾನು ರಾಜ್ಯದ ಜನರಿಂದ ಸ್ಥಾಪನೆಗೊಂಡಿರುವ ಮುಖ್ಯಮಂತ್ರಿ. ರಾಜ್‌ ಅವರನ್ನು ರಾಜ್ಯದ ಜನರು ಮೂಲೆಗುಂಪು ಮಾಡಿದ್ದರಿಂದ ಅವರು ಮನೆಯಲ್ಲೇ ಕುಳಿತುಕೊಳ್ಳುವಂತಾಗಿದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು