ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರ್ಗಾದೇವಿ ವಿಸರ್ಜನೆ ವೇಳೆ ದುರಂತ: ಪರ್ಬಾತಿ ನದಿಯಲ್ಲಿ ಮುಳುಗಿ 10 ಜನ ಸಾವು

Last Updated 9 ಅಕ್ಟೋಬರ್ 2019, 3:10 IST
ಅಕ್ಷರ ಗಾತ್ರ

ಧೋಲ್‌ಪುರ್‌ (ರಾಜಸ್ಥಾನ): ಇಲ್ಲಿನ ಪರ್ಬಾತಿ ನದಿಯಲ್ಲಿ ದುರ್ಗಾದೇವಿ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

ಮಂಗಳವಾರ ಸಂಜೆ ಇಲ್ಲಿನ ನಿವಾಸಿಗಳು ವಿಜಯದಶಮಿ ಪ್ರಯುಕ್ತ ದುರ್ಗಾದೇವಿಯನ್ನು ಮೆರವಣಿಗೆ ಮೂಲಕ ನದಿ ತೀರಕ್ಕೆ ತರಲಾಗಿತ್ತು. ದುರ್ಗಾ ದೇವಿ ವಿಸರ್ಜನೆ ಸಂದರ್ಭದಲ್ಲಿ ಬಾಲಕನೊಬ್ಬ ಈಜಲು ನದಿಗೆ ದುಮಿಕಿದ್ದಾನೆ, ಬಳಿಕ ಸುಳಿಗೆ ಸಿಲುಕಿ ಮುಳುಗಿದ್ದಾನೆ. ಈ ಬಾಲಕನನ್ನು ರಕ್ಷಿಸಲು ಮತ್ತೆ ಇಬ್ಬರು ನದಿಗೆ ಹಾರಿದ್ದಾರೆ ಅವರು ಕೂಡ ಮುಳುಗಿದ್ದಾರೆ, ಇವರನ್ನು ರಕ್ಷಿಸಲು ಮತ್ತೆ ಕೆಲವರು ನದಿಗೆ ಹಾರಿದ್ದು 10 ಜನರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲಿಸರು ತಿಳಿಸಿದ್ದಾರೆ.

ಇಲ್ಲಿಯವರೆಗೂ 7 ಮೃತ ದೇಹಗಳನ್ನು ಹೊರತೆಗೆಯಲಾಗಿದ್ದು ಇನ್ನು ಮೂವರಿಗಾಗಿ ಶೋಧ ಕಾರ್ಯಾ ನಡೆಸಲಾಗುತ್ತಿದೆ ಎಂದು ಧೋಲ್‌ಪುರ್‌ ಜಿಲ್ಲಾಧಿಕಾರಿ ರಾಕೇಶ್‌ ಜೈಸ್ವಾಲ್‌ ತಿಳಿಸಿದ್ದಾರೆ.

ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮೃತಪಟ್ಟವರ ಕುಟುಂಬಳಿಗೆ ₹ 1 ಲಕ್ಷ ಪರಿಹಾರ ನೀಡಲಾಗುವುದು ಎಂದು ರಾಕೇಶ್ ಜೈಸ್ವಾಲ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT