ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನ: ಜನರನ್ನು ಮತದಾನದತ್ತ ಸೆಳೆಯಲು ಹಾವು–ಏಣಿ ಆಟ ಆಯೋಜಿಸಿದ ಜಿಲ್ಲಾಡಳಿತ

Last Updated 24 ಅಕ್ಟೋಬರ್ 2018, 4:01 IST
ಅಕ್ಷರ ಗಾತ್ರ

ಬಾರ್ಮರ್‌: ಸ್ಥಳೀಯ ಮತದಾರರಲ್ಲಿ ಮತದಾನದ ಜಾಗೃತಿ ಮೂಡಿಸಲು ಹಾಗೂ ಮತದಾನದಲ್ಲಿ ಪಾಲ್ಗೊಳ್ಳುವುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಇಲ್ಲಿನ ಜಿಲ್ಲಾಡಳಿತವು ಹಾವು–ಏಣಿಆಟ ಆಯೋಜಿಸಿದೆ. ಅದಕ್ಕಾಗಿ 1,600 ಚದರ ಅಡಿಯಷ್ಟು ಅಗಲದ ಬೋರ್ಡ್‌ ಅನ್ನೂ ನಿರ್ಮಿಸಿದೆ.

ಹಾವು–ಏಣಿ ಆಟದ ನಿಯಮಗಳು ಮತದಾನ ಪ್ರಕ್ರಿಯೆಯನ್ನು ಪ್ರತಿನಿಧಿಸುತ್ತವೆ. ಹಣ, ಜಾತಿ, ಆಮಿಷಗಳಿಗೆ ಒಳಗಾಗಿ ಮತ ಚಲಾಯಿಸಬಾರದು. ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸದಿರುವುದಕ್ಕೆ ದಂಡ ಕಟ್ಟಬೇಕಾಗುತ್ತದೆ ಎಂಬುದನ್ನು ಆಟದಲ್ಲಿ ಹಾವು ಕಚ್ಚುವುದಕ್ಕೆ ಹೋಲಿಸಲಾಗಿದೆ.

ಹಾಗೆಯೇಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವುದು, ಪ್ರಜಾಪ್ರಭುತ್ವ ವ್ಯವಸ್ಥೆಯ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಿಕೆಯನ್ನು ಏಣಿಗೆ ಹೋಲಿಸಿ, ಅಭಿವೃದ್ಧಿಯತ್ತ ಸಾಗುವ ಕುರಿತು ಜಾಗೃತಿ ಮೂಡಿಸುವ ಪ್ರಯತ್ನವನ್ನು ಜಿಲ್ಲಾಡಳಿತ ಮಾಡುತ್ತಿದೆ.

ಈ ಕುರಿತು ಮಾಹಿತಿ ನೀಡಿರುವಬಾರ್ಮರ್‌ ಜಿಲ್ಲಾಧಿಕಾರಿ ಶಿವಪ್ರಸಾದ್‌ ಮದನ್‌ ನಕಾಟೆ, ‘ಇದಕ್ಕೂ ಮೊದಲು ನೀರನ್ನು ಉಳಿಸಿಅಭಿಯಾನದ ವೇಳೆ ಈ ರೀತಿಯ ಪ್ರಯತ್ನ ಮಾಡಲಾಗಿತ್ತು’ ಎಂದಿದ್ದಾರೆ.

‘ಆ ವೇಳೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಭಿಯಾನವನ್ನು ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ದಾಖಲಿಸಲಾಗಿತ್ತು. ಈ ಬಗ್ಗೆ ತಿಳಿದ ನಂತರ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಈ ಪ್ರಯೋಗ ಮಾಡಲು ನಿರ್ಧರಿಸಲಾಯಿತು. ಯೋಜನೆಯನ್ನೂ ಲಿಮ್ಕಾಗೆ ಕಳುಹಿಸಿಕೊಡಲುಜಿಲ್ಲಾಡಳಿತ ತೀರ್ಮಾನಿಸಿದೆ’ ಎಂದೂ ತಿಳಿಸಿದರು.

ಈ ಪ್ರಯೋಗವನ್ನು ವಿಧಾನಸಭೆ ಚುನಾವಣೆಯಲ್ಲಿಯೂ ಮುಂದುವರಿಸಲಾಗುವುದು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT