ಟೊಂಕ್‍ನಲ್ಲಿ ಸಚಿನ್ ಪೈಲಟ್‍ಗೆ ಐತಿಹಾಸಿಕ ಗೆಲುವು

7

ಟೊಂಕ್‍ನಲ್ಲಿ ಸಚಿನ್ ಪೈಲಟ್‍ಗೆ ಐತಿಹಾಸಿಕ ಗೆಲುವು

Published:
Updated:

ಟೊಂಕ್ (ರಾಜಸ್ಥಾನ): ಟೊಂಕ್‍ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಚಿನ್ ಪೈಲಟ್ ಸುಮಾರು 50,000 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಶೇ. 25ರಷ್ಟು ಮುಸ್ಲಿಂ ಮತದಾರರು ಇರುವ ಟೊಂಕ್ ಕ್ಷೇತ್ರದಲ್ಲಿ ಸಚಿನ್ ಪೈಲಟ್ ಗೆಲುವು ಕಾಂಗ್ರೆಸ್‌‍ಗೆ ಹೆಚ್ಚಿನ ಶಕ್ತಿ ತುಂಬಿದೆ.

ಕಳೆದ  46 ವರ್ಷಗಳಲ್ಲಿ ಇಲ್ಲಿನ ಮುಸ್ಲಿಂ ಅಭ್ಯರ್ಥಿಗಳನ್ನೇ ಕಾಂಗ್ರೆಸ್ ಕಣಕ್ಕಳಿಸಿತ್ತು. ಆದರೆ ಈ ಬಾರಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ಸಚಿನ್ ಪೈಲಟ್‍ನ್ನು ಕಣಕ್ಕಿಳಿಸಿ ಕಾಂಗ್ರೆಸ್ ಅಗ್ನಿ ಪರೀಕ್ಷೆಗೆ ಮುಂದಾಗಿತ್ತು. ಕೇಂದ್ರದ ಮಾಜಿ ಸಚಿವ, ಪಿಸಿಸಿ ಅಧ್ಯಕ್ಷ ಆಗಿರುವ ಸಚಿನ್ ಪೈಲಟ್ ಇದೇ ಮೊದಲ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಇಲ್ಲಿಯವರೆಗೆ ಸಚಿನ್, ಅವರ ಅಪ್ಪ ರಾಜೇಶ್ ಪೈಲಟ್, ಅಮ್ಮ ರಮಾ ಪೈಲಟ್ ಸ್ಪರ್ಧಿಸಿದ್ದ ಕ್ಷೇತ್ರಗಳಲ್ಲಿ ಮಾತ್ರ ಚುನಾವಣಾ ಕಣಕ್ಕಿಳಿದಿದ್ದರು.

1985ರಿಂದ ಕಳೆದ ಚುನಾವಣೆವರೆಗೆ ಮುಸ್ಲಿಂ ಮಹಿಳಾ ಅಭ್ಯರ್ಥಿ ಜಾಕಿಯಾ ಅವರನ್ನೇ ಕಾಂಗ್ರೆಸ್ ಟೊಂಕ್‍ನಲ್ಲಿ ಕಣಕ್ಕಿಳಿಸುತ್ತಿತ್ತು, ಆದರೆ ಈ ಬಾರಿ ಅವರನ್ನು ಬದಲಾಯಿಸಿದಕ್ಕೆ ಕಾಂಗ್ರೆಸ್‍ನಲ್ಲಿಯೂ ಸಣ್ಣ ಪ್ರಮಾಣದ ಭಿನ್ನಮತ ಗೋಚರಿಸಿತ್ತು. ಆದರೆ ಈ ಭಿನ್ನಮತಗಳು ಯಾವುದೂ ಸಚಿನ್ ಗೆಲುವಿಗೆ ಅಡ್ಡ ಬಂದಿಲ್ಲ.
ಬಿಜೆಪಿ ಇಲ್ಲಿ ಅಜಿತ್ ಸಿಂಗ್ ಮೆಹ್ತಾ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿತ್ತು.  2013ರಲ್ಲಿ 30,000ಕ್ಕಿಂತವೂ ಹೆಚ್ಚು ಮತ ಗಳಿಸಿ ಮೆಹ್ತಾ ಗೆದ್ದ ಕ್ಷೇತ್ರವಾಗಿದೆ ಇದು. ಆದರೆ ಕಾಂಗ್ರೆಸ್ ಅಭ್ಯರ್ಥಿ ಸಚಿನ್ ಇಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂದು ಅರಿತ ಕೂಡಲೇ ಬಿಜೆಪಿ ಮುಸ್ಲಿಂ ಅಭ್ಯರ್ಥಿ ಯೂನಸ್ ಖಾನ್‍ನ್ನು ಕಣಕ್ಕಿಳಿಸಿತ್ತು, ಆದರೆ ಬಿಜೆಪಿಯ ಕಾರ್ಯತಂತ್ರ ಇಲ್ಲಿ ಫಲ ನೀಡಲಿಲ್ಲ.

ಸಚಿನ್ ಪೈಲಟ್ ಪತ್ನಿ ಸಾರಾ ಪೈಲಟ್ ಅವರ ಅಪ್ಪ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ ಅವರ ಸ್ನೇಹಿತರಾಗಿದ್ದಾರೆ ಟೊಂಕ್‍ನ ಪ್ರಬಲ ಮುಸ್ಲಿಂ ಕುಟುಂಬದ ಒಡೆಯ ಅಜ್ಮಲ್ ಸೈಥಿ, ಈ ಸ್ನೇಹ ಸಂಬಂಧ ಕೂಡಾ ಸಚಿನ್ ಗೆಲುವಿಗೆ ಕಾರಣವಾಗಿದೆ ಎಂದು ಹೇಳಲಾಗಿದೆ

ಪಕ್ಷ ಅಧಿಕಾರಕ್ಕೇರದೆ ಸಫಾ ತೊಡುವುದಿಲ್ಲ ಎಂಬ ಪ್ರತಿಜ್ಞೆ ಕೈಗೊಂಡಿದ್ದರು ಸಚಿನ್
ಈ ಹಿಂದೆ ಸಚಿನ್ ಪೈಲಟ್ ರಾಜಸ್ಥಾನದ ಸಾಂಪ್ರದಾಯಿಕ ಪೇಟ 'ಸಫಾ' ತೊಡುತ್ತಿದ್ದರು. ಆದರೆ ಕಳೆದ ನಾಲ್ಕು ವರ್ಷಗಳಿಂದ ಅವರು ಈ ಪೇಟ ತೊಟ್ಟಿಲ್ಲ. ಇದಕ್ಕೆ ಕಾರಣವೂ ಇದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರದೆ ತಾನು ಸಫಾ ತೊಡುವುದಿಲ್ಲ ಎಂದು 2014ರಲ್ಲಿ ಸಚಿನ್ ಪ್ರತಿಜ್ಞೆ ಮಾಡಿದ್ದರು.
2014ರಲ್ಲಿ ನಮ್ಮ ಪಕ್ಷ ಪರಾಭವಗೊಂಡಾಗ, ನಾನಿನ್ನು ಸಫಾ ತೊಡುವುದಿಲ್ಲ. ನಮ್ಮ ಪಕ್ಷ ಅಧಿಕಾರಕ್ಕೇರಿದ ನಂತರವೇ ಸಫಾ ತೊಡುತ್ತೇನೆ. ಹಾಗಾಗಿ ನಮ್ಮ ಸಂಸ್ಕೃತಿಯ ಪ್ರತೀಕವಾದ ನಾನು ಇಷ್ಟಪಟ್ಟು ತೊಡುವ ಪೇಟ ಸಫಾ ತೊಡಲಿಲ್ಲ ಎಂದು ಸಚಿನ್ ಪೈಲಟ್ ತಮ್ಮ ಪ್ರತಿಜ್ಞೆ ಬಗ್ಗೆ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 16

  Happy
 • 0

  Amused
 • 2

  Sad
 • 0

  Frustrated
 • 1

  Angry

Comments:

0 comments

Write the first review for this !