ಶನಿವಾರ, ಡಿಸೆಂಬರ್ 14, 2019
25 °C

ಅಯೋಧ್ಯೆ ಪ್ರಕರಣ:  ಮುಸ್ಲಿಂ ಕಕ್ಷಿದಾರರ ಪರ ವಾದಿಸಿದ್ದ ವಕೀಲ ರಾಜೀವ್ ಧವನ್ ವಜಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Rajeev Dhavan

 ನವದೆಹಲಿ: ಅಯೋಧ್ಯೆ-ಬಾಬರಿ ಮಸೀದಿ ಭೂ ವಿವಾದ ಪ್ರಕರಣದಲ್ಲಿ ಸುನ್ನಿ ವಕ್ಫ್ ಮಂಡಳಿ ಮತ್ತು ಮುಸ್ಲಿಂ ಕಕ್ಷಿದಾರರ ಪರ ಸುಪ್ರೀಂಕೋರ್ಟ್‌ನಲ್ಲಿ ವಾದಿಸಿದ್ದ ಹಿರಿಯ ವಕೀಲ ರಾಜೀವ್ ಧವನ್ ಅವರನ್ನು ಪ್ರಕರಣದಿಂದ ವಜಾಗೊಳಿಸಲಾಗಿದೆ. ಆದರೆ, ವಜಾಗೊಳಿಸಲು ನೀಡಿದ ಕಾರಣ ಸರಿಯಲ್ಲ ಎಂದು ಧವನ್ ಕಿಡಿ ಕಾರಿದ್ದಾರೆ.

ಜಮೀಯತ್‌ನ್ನು ಪ್ರತಿನಿಧಿಕರಿಸುತ್ತಿರುವ ಅಡ್ವೊಕೇಟ್ ಆನ್ ರೆಕಾರ್ಡ್ (ಎಒಆರ್)  ಇಜಾಝ್ ಮಕ್ಬೂಲ್ ಅವರು ತಮ್ಮನ್ನು ಬಾಬರಿ ಪ್ರಕರಣದಿಂದ ವಜಾ ಮಾಡಿದ್ದಾರೆ. ನಾನು ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿಲ್ಲ. ಈ ಪ್ರಕರಣದಲ್ಲಿ ಇನ್ನು ಮುಂದೆ ನಾನು ಭಾಗಿಯಾಗಲ್ಲ ಎಂದಿದ್ದಾರೆ ಧವನ್.

 

ಆರೋಗ್ಯ ಸರಿ ಇಲ್ಲದಿರುವ ಕಾರಣ ಬಾಬರಿ ಪ್ರಕರಣದಲ್ಲಿ ವಕೀಲರಾಗಿ ಮುಂದುವರಿಸಲ್ಲ ಎಂದು ಜಮೀಯತ್‌ ಉಲೇಮಾ ಎ ಹಿಂದ್‌ ಅಧ್ಯಕ್ಷ ಮೌಲಾನಾ ಅರ್ಷದ್‌ ಮದನಿ ತನಗೆ ಮಾಹಿತಿ ನೀಡಿದ್ದರು.ಇದು ನಿಜಕ್ಕೂ ಮೂರ್ಖತನ. ಪ್ರಕರಣದಲ್ಲಿ ಯಾರು ವಾದಿಸಬೇಕೆಂದು ವಕೀಲರ ನೇಮಕ ಮಾಡುವ ಹಕ್ಕು ಅವರಿಗೆ ಇದೆ. ಆದರೆ ಇಜಾಝ್ ಸೂಚನೆ ಮೇರೆಗೆ ನನ್ನ ವಜಾಗೊಳಿಸಲಾಗಿದೆ. ಆದರೆ ವಜಾಗೊಳಿಸುವುದಕ್ಕಾಗಿ ನೀಡಿರುವ ಕಾರಣ ದುರುದ್ದೇಶ ಮತ್ತು ಸುಳ್ಳು ಎಂದು ಧವನ್ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ಅಯೋಧ್ಯೆ ವಿವಾದ: ಮುಸ್ಲಿಂ ಕಕ್ಷಿದಾರರಿಗೆ ಮಾತ್ರ ಪ್ರಶ್ನೆ ಏಕೆ?

ಸೋಮವಾರ ಅಯೋಧ್ಯೆಯ ರಾಮ ಭೂಮಿ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್‌ನಲ್ಲಿ ಮರು ವಿಮರ್ಶೆ ಅರ್ಜಿ ಸಲ್ಲಿಸಲಾಗಿತ್ತು.

ಮೌಲಾನಾ ಸಯ್ಯದ್ ಅಶಾದ್ ರಷೀದಿ ಅವರು ಅರ್ಜಿ ಸಲ್ಲಿಸಿದ್ದು ಬಾಬರಿ ಮಸೀದಿ ನಿರ್ಮಾಣಕ್ಕೆ ಅವಕಾಶ ನೀಡುವ ಮೂಲಕ  ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಅಯೋಧ್ಯೆ ತೀರ್ಪು: ‘ಸುಪ್ರೀಂ’ ನ್ಯಾಯಪೀಠ ಹೇಳಿದ್ದಿಷ್ಟು...

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು