ಗುರುವಾರ , ನವೆಂಬರ್ 14, 2019
22 °C

ರಾಜೀವ್‌ಗಾಂಧಿ ಹತ್ಯೆ ಪ್ರಕರಣ: ಸಿಬಿಐನಿಂದ ವರದಿ ಕೇಳಿದ ‘ಸುಪ್ರೀಂ’

Published:
Updated:

ನವದೆಹಲಿ: ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ನಡೆಯುತ್ತಿರುವ ತನಿಖೆಯ ಪ್ರಗತಿ ವರದಿಯನ್ನು ನಾಲ್ಕು ವಾರಗಳ ಒಳಗಾಗಿ ಸಲ್ಲಿಸುವಂತೆ ಸಿಬಿಐಗೆ ಸುಪ್ರೀಂಕೋರ್ಟ್‌ ಮಂಗಳವಾರ ಸೂಚಿಸಿದೆ.

ಸಿಬಿಐ ನೇತೃತ್ವದಲ್ಲಿ ಬಹುಶಿಸ್ತೀಯ ನಿಗಾ ಸಂಸ್ಥೆ (ಎಂಡಿಎಂಎ), ನೀಡಿರುವ ವರದಿ ಒಂದು ವರ್ಷ ಹಳೆಯದ್ದು. ಆಗ ಬೇರೆ ದೇಶಗಳಿಗೆ ರವಾನಿಸಿದ್ದ ಪತ್ರಗಳಿಗೆ ಇನ್ನೂ ಉತ್ತರ ಬಂದಿರಲಿಲ್ಲ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಪ್ರಕರಣಕ್ಕೆ ಸಂಬಂಧಿಸಿ ಶ್ರೀಲಂಕಾ, ಥಾಯ್ಲೆಂಡ್‌  ಹಾಗೂ ಇತರ ದೇಶಗಳಿಗೆ ಕಳುಹಿಸಿದ್ದ ಪತ್ರಗಳಿಗೆ ಆ ರಾಷ್ಟ್ರಗಳು ನೀಡಿರುವ ಉತ್ತರವನ್ನು ಸಹ ವರದಿಯೊಂದಿಗೆ ಸಲ್ಲಿಸುವಂತೆ ನ್ಯಾಯಮೂರ್ತಿಗಳಾದ ಎಲ್‌.ನಾಗೇಶ್ವರರಾವ್‌ ಹಾಗೂ ಹೇಮಂತ್‌ ಗುಪ್ತಾ ಅವರಿರುವ ಪೀಠವು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಪಿಂಕಿ ಆನಂದ್‌ ಅವರಿಗೆ ಸೂಚಿಸಿತು.

ಪ್ರತಿಕ್ರಿಯಿಸಿ (+)