ರಾಜೀವ್‌ಗಾಂಧಿ ಹಂತಕರಿಗೆ ಮಮಕಾರ ತೋರಲಾಗದು: ಕೇಂದ್ರ ಸರ್ಕಾರ 

7

ರಾಜೀವ್‌ಗಾಂಧಿ ಹಂತಕರಿಗೆ ಮಮಕಾರ ತೋರಲಾಗದು: ಕೇಂದ್ರ ಸರ್ಕಾರ 

Published:
Updated:

ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಹತ್ಯೆಗೈದು, ತಮಿಳುನಾಡಿನ ಜೈಲಿನಲ್ಲಿರುವ ಅಪರಾಧಿಗಳನ್ನು ಬಿಡುಗಡೆಗೊಳಿಸಲಾಗದು ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಹೇಳಿದೆ. 

ಹತ್ಯೆ ಸಂಬಂಧ ಏಳು ಮಂದಿ ಹಂತಕರು 27 ವರ್ಷಗಳಿಂದ ಜೈಲುವಾಸ ಅನುಭವಿಸುತ್ತಿದ್ದಾರೆ. ಅವರನ್ನು ಬಿಡುಗಡೆ ಮಾಡುವಂತೆ ತಮಿಳುನಾಡು ಸರ್ಕಾರ ಪ್ರಸ್ತಾವ ಸಲ್ಲಿಸಿತ್ತು. 

ಕೇಂದ್ರ ಸರ್ಕಾರದ ಅನುಮತಿಯಿಲ್ಲದೆ ಅಪರಾಧಿಗಳ ಬಿಡುಗಡೆ ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ ತಿಳಿಸಿದೆ. ಈ ಪ್ರಕರಣದ ತನಿಖೆ ನಡೆಸಿರುವ ಸಿಬಿಐ ತಮಿಳುನಾಡು ಸರ್ಕಾರದ ಮನವಿಯನ್ನು ವಿರೋಧಿಸಿತ್ತು. 

ಅಪರಾಧಿಗಳ ಬಿಡುಗಡೆಯನ್ನು ತಿರಸ್ಕರಿಸಿರುವ ಕೇಂದ್ರ, ‘ರಾಜೀವ್‌ಗಾಂಧಿ ಹತ್ಯೆ ಒಂದು ಘೋರ ಹಾಗೂ ಭಯಾನಕ ಘಟನೆ. ಇಂತಹ ದುಷ್ಕರ್ಮಿಗಳಿಗೆ ಮಮಕಾರ ತೋರಬಾರದು. ಅವರನ್ನು ಹೊರಗೆ ಕಳುಹಿಸಿದ್ದಲ್ಲಿ ಜಗತ್ತು ಹಾಗೂ ರಾಷ್ಟ್ರದಾದ್ಯಂತ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ’ ಎಂದು ಹೇಳಿದೆ. 

ರಾಜೀವ್‌ಗಾಂಧಿ ಅವರು 1991ರ ಮೇ 21ರಂದು ತಮಿಳುನಾಡಿನಲ್ಲಿ ಚುನಾವಣಾ ಪ್ರಚಾರದ ವೇಳೆ ಹತ್ಯೆಯಾಗಿದ್ದರು. 
 

ಬರಹ ಇಷ್ಟವಾಯಿತೆ?

 • 18

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !