ಬಿಜೆಪಿ ಸೇರಿದ ಛತ್ತೀಸ್‍ಗಡ ಕಾಂಗ್ರೆಸ್ ಕಾರ್ಯಾಧ್ಯಕ್ಷ  ರಾಮದಯಾಳ್ ಉಕೆ

7

ಬಿಜೆಪಿ ಸೇರಿದ ಛತ್ತೀಸ್‍ಗಡ ಕಾಂಗ್ರೆಸ್ ಕಾರ್ಯಾಧ್ಯಕ್ಷ  ರಾಮದಯಾಳ್ ಉಕೆ

Published:
Updated:

ನವದೆಹಲಿ: ಛತ್ತೀಸ್‍ಗಡ ವಿಧಾನಸಭೆ ಚುನಾವಣೆಗೆ ವಾರ ಬಾಕಿ ಇರುವಾಗ ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷ ರಾಮದಯಾಳ್ ಉಕೆ  ಬಿಜೆಪಿಗೆ ಸೇರಿದ್ದಾರೆ. ಪಾಲಿ-ತನಾಖರ್ ಶಾಸಕರಾಗಿದ್ದಾರೆ ಇವರು. 

ಬಿಲಾಸ್‍ಪುರ್ ಪ್ರದೇಶದ ಬುಡಕಟ್ಟು ಸಮುದಾಯದ ನಾಯಕರಾಗಿರುವ ಉಕೆ, ಬಿಜೆಪಿ ಅಧ್ಯಕ್ಷ ಅಮಿಕ್ ಶಾ ಮತ್ತು ಮುಖ್ಯಮಂತ್ರಿ ರಮಣ್ ಸಿಂಗ್ ಅವರ ನೇತೃತ್ವದಲ್ಲಿ ಶನಿವಾರ ಬಿಜೆಪಿಗೆ ಸೇರಿದ್ದಾರೆ. ಕಾಂಗ್ರೆಸ್ ಬುಡಕಟ್ಟು ಜನರ ಹಿತಾಸಕ್ತಿಯನ್ನು ಕಡೆಗಣಿಸುತ್ತಿರುವುದರಿಂದ ತಾನು ಬಿಜೆಪಿಗೆ ಸೇರಿರುವುದಾಗಿ ಉಕೆ ಹೇಳಿದ್ದಾರೆ.

ಬುಡಕಟ್ಟು ಜನಾಂಗದ ನೇತಾರರನ್ನು ಕಡೆಗಣಿಸಲಾಗುತ್ತಿದೆ ಮತ್ತು ಕಾಂಗ್ರೆಸ್‌ ನಮ್ಮನ್ನು ಪರಿಗಣಿಸುತ್ತಿಲ್ಲ. ಅವರು ಹೇಳುವುದು ಒಂದು ಮಾಡುವುದು ಇನ್ನೊಂದು. ಬುಡಕಟ್ಟು ಜನರ, ಹಿಂದುಳಿದ ವರ್ಗದವರ ಮತ್ತು ಬಡವರ ಹಿತಾಸಕ್ತಿಯನ್ನು ಕಾಂಗ್ರೆಸ್ ಕಡೆಗಣಿಸಿದೆ. ನಾನೊಬ್ಬ ಬುಡಕಟ್ಟು ಜನಾಂಗದ ನೇತಾರನಾಗಿ ನನಗೆ ದುಃಖವಾಗುತ್ತಿದೆ. ಮುಖ್ಯಮಂತ್ರಿ ರಮಣ್ ಸಿಂಗ್ ಅವರು ಬುಡಕಟ್ಟು ಮತ್ತು ಹಿಂದುಳಿದ ಜನರ ಅಭಿವೃದ್ದಿಗಾಗಿ ಉತ್ತಮ ಕೆಲಸ ಮಾಡುತ್ತಿದ್ದು ಅದರಿಂದ ಪ್ರಭಾವಿತನಾಗಿ ನಾನು ಬಿಜೆಪಿ ಸೇರಿದೆ. ಕಾಂಗ್ರೆಸ್‍ನಲ್ಲಿ ಉಸಿರುಗಟ್ಟುತ್ತಿತ್ತು. ಇದೊಂಥರಾ ಘರ್ ವಾಪಸಿ ಆದಂತೆ ಎಂದಿದ್ದಾರೆ ಉಕೆ.
 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !