ಭಾನುವಾರ, ನವೆಂಬರ್ 17, 2019
28 °C

ಕೋವಿಂದ್ ರಾಜ್ಯೋತ್ಸವ ಶುಭಾಶಯ: ಅಲ್ಪಪ್ರಾಣದ ಬದಲು ಮಹಾಪ್ರಾಣ ಬಳಸಿದ ಆ ಪದ ಯಾವುದು?

Published:
Updated:

ನವದೆಹಲಿ: ಕನ್ನಡ ರಾಜ್ಯೋತ್ಸವಕ್ಕೆ ಶುಭಾಶಯ ಕೋರಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಮಾಡಿರುವ ಟ್ವೀಟ್‌ನಲ್ಲಿ ತಪ್ಪು ಕನ್ನಡ ಪದ ಬಳಕೆಯಾಗಿದೆ. 

ಇದನ್ನೂ ಓದಿ: ರಾಜ್ಯೋತ್ಸವಕ್ಕೆ ಕನ್ನಡದಲ್ಲಿ ಶುಭಾಶಯ ಕೋರಿದ ಕೋವಿಂದ್ ಮತ್ತು ಮೋದಿ

ರಾಷ್ಟ್ರಪತಿಗಳು ಮಾಡಿರುವ ಟ್ವೀಟ್‌ ಈ ರೀತಿ ಇದೆ: ಕರ್ನಾಟಕ ರಾಜ್ಯೋತ್ಸವದ ಈ ದಿನದಂದು, ಕರ್ನಾಟಕದ ಜನತೆಗೆ ಹಾರ್ಧಿಕ ಅಭಿನಂದನೆಗಳು ಹಾಗೂ ಶುಭಾಶಯಗಳು. ಮುಂಬರುವ ವರ್ಷಗಳಲ್ಲಿ, ಕರ್ನಾಟಕ ರಾಜ್ಯ ಹಾಗೂ ನಮ್ಮ ದೇಶವು ಇನ್ನೂ ಉನ್ನತ ಮಟ್ಟಕ್ಕೇರಲಿ — ರಾಷ್ಟ್ರಪತಿ ಕೊವಿಂದ್.

ಹಾರ್ಧಿಕ ಪದದಲ್ಲಿ ‘ಧಿ’ ಅಕ್ಷರವನ್ನು ಮಹಾಪ್ರಾಣ ಮಾಡಿದ್ದಾರೆ. ‘ದಿ‘ ಅಕ್ಷರ ಅಲ್ಪಪ್ರಾಣವಾಗಬೇಕಿತ್ತು. ಹಾರ್ದಿಕ ಸರಿಯಾದ ಪದ ಬಳಕೆಯಾಗಿದೆ. ಹಾರ್ದಿಕ ಎಂದರೆ ಹೃದಯದಿಂದ ಎಂಬ ಅರ್ಥವನ್ನು ಕೊಡುತ್ತದೆ. 

ರಾಮನಾಥ್‌ ಕೋವಿಂದ್‌ ಅವರ ಟ್ವೀಟ್‌ಗೆ ಕನ್ನಡಿಗರು ಧನ್ಯವಾದಗಳನ್ನು ಹೇಳಿದ್ದಾರೆ. ಕೆಲವರು ಹಾರ್ದಿಕ ಎಂದು ಸರಿಪಡಿಸಲು ಪ್ರಯತ್ನಿಸಿದ್ದಾರೆ. 

ಪ್ರತಿಕ್ರಿಯಿಸಿ (+)