ಪ್ರಧಾನಿ ಮೋದಿಯನ್ನು ‘ಚೋರ್‌’ ಎಂದು ರಮ್ಯಾ ಟ್ವೀಟ್; ದೇಶದ್ರೋಹ ಪ್ರಕರಣ ದಾಖಲು

7
ಲಖನೌ ವಕೀಲ ಸಯ್ಯದ್ ರಿಜ್ವಾನ್ ಅಹ್ಮದ್ ದೂರಿನ ಆಧಾರದಲ್ಲಿ ಕ್ರಮ

ಪ್ರಧಾನಿ ಮೋದಿಯನ್ನು ‘ಚೋರ್‌’ ಎಂದು ರಮ್ಯಾ ಟ್ವೀಟ್; ದೇಶದ್ರೋಹ ಪ್ರಕರಣ ದಾಖಲು

Published:
Updated:

ಲಖನೌ: ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಚೋರ್’ ಎಂದು ಟ್ವೀಟ್ ಮಾಡಿರುವ ಕಾಂಗ್ರೆಸ್‌ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ರಮ್ಯಾ ವಿರುದ್ಧ ಉತ್ತರ ಪ್ರದೇಶದ ಗೋಮತಿನಗರ ಪೊಲೀಸ್‌ ಠಾಣೆಯಲ್ಲಿ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ.

ಮಾಹಿತಿ ತಂತ್ರಜ್ಞಾನ (ತಿದ್ದುಪಡಿ) ಕಾಯ್ದೆಯ ಕಲಂ 67 ಹಾಗೂ ಭಾರತೀಯ ದಂಡಸಂಹಿತೆಯ ಕಲಂ 124ಎ ಅನ್ವಯ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ. ಲಖನೌನ ವಕೀಲ ಸಯ್ಯದ್ ರಿಜ್ವಾನ್ ಅಹ್ಮದ್ ನೀಡಿದ್ದ ದೂರಿನ ಆಧಾರದಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಮೋದಿ ಅವರ ಮೇಣದ ಪ್ರತಿಮೆಯ ಮೇಲೆ ಮೋದಿ ಅವರೇ ‘ಚೋರ್’ ಎಂದು ಬರೆಯುತ್ತಿರುವ ಫೋಟೋಶಾಪ್ ಮಾಡಲಾದ ಚಿತ್ರವನ್ನು ಟ್ವೀಟ್ ಮಾಡಿದ್ದ ರಮ್ಯಾ, #ChorPMChupHai ಹ್ಯಾಷ್‌ಟ್ಯಾಗ್ ಬರೆದಿದ್ದರು.
 

ಎಫ್‌ಐಆರ್‌ನ ಚಿತ್ರವನ್ನು ಟ್ವಿಟರ್‌ನಲ್ಲಿ ಪ್ರಕಟಿಸಿರುವ ವಕೀಲ ರಿಜ್ವಾನ್, ಪ್ರಧಾನಿಯವರ ಕಾನೂನು ತಂಡ ಸಕ್ರಿಯವಾಗಿರಬೇಕು. ನೀವು (ಮೋದಿ) ದೇಶದ ಪ್ರಧಾನಿಯಾಗಿರುವುದರಿಂದ ನಾನು ಮತ್ತು ನನ್ನ ಟ್ವಿಟರ್‌ ಸ್ನೇಹಿತ ಕಾನೂನು ಪ್ರಕ್ರಿಯೆ ಆರಂಭಿಸಿದ್ದೇವೆ. ನಾವು ಯಾವುದೇ ನಿರ್ದಿಷ್ಟ ತಂಡಕ್ಕೆ ಸೇರಿಲ್ಲ ಎಂದೂ ಬರೆದುಕೊಂಡಿದ್ದಾರೆ.
 

ಜತೆಗೆ, ರಮ್ಯಾ ಅವರ ಬಳಿ ಟ್ವೀಟ್‌ ಅನ್ನು ಅಳಿಸಿಹಾಕುವಂತೆ ಪರಿಪರಿಯಾಗಿ ಮನವಿ ಮಾಡಿದ್ದರೂ ಅದಕ್ಕೊಪ್ಪಲಿಲ್ಲ. ಹೀಗಾಗಿ ಪೊಲೀಸರಿಗೆ ದೂರು ನೀಡಿದ್ದಾಗಿಯೂ ಹೇಳಿಕೊಂಡಿದ್ದಾರೆ. ಆರ್‌ಎಸ್‌ಎಸ್, ಬಿಜೆಪಿ ಜತೆ ಸಂಬಂಧವಿಲ್ಲ ಎಂದೂ ಅವರು ಹೇಳಿದ್ದಾರೆ.
 

‘ಪ್ರಕರಣವನ್ನು ಬಿಜೆಪಿ ಮುಂದುವರಿಸಿಕೊಂಡು ಹೋಗಬೇಕು. ನನ್ನ ಅನುಭವದ ಪ್ರಕಾರ, ಒಬ್ಬ ವ್ಯಕ್ತಿ ಮಾನಹಾನಿ ಪ್ರಕರಣವನ್ನು ಮುಂದುವರಿಸಿಕೊಂಡು ಹೋಗುವುದು ಅಷ್ಟು ಸುಲಭವಲ್ಲ. ಒಂದು ಸಂಸ್ಥೆಯಾಗಿ ಬಿಜೆಪಿಯೇ ಅದನ್ನು ಮುಂದುವರಿಸಿಕೊಂಡು ಹೋಗುವುದು ಸೂಕ್ತ’ ಎಂದೂ ಅವರು ಟ್ವೀಟ್ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 21

  Happy
 • 1

  Amused
 • 1

  Sad
 • 1

  Frustrated
 • 5

  Angry

Comments:

0 comments

Write the first review for this !