ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಜಿತ್‌ ಸಿಂಗ್‌ ವಿಶ್ವದ ಶ್ರೇಷ್ಠ ನಾಯಕ

‘ಪಂಜಾಬ್‌ನ ಸಿಂಹ’ ಎಂಬ ಬಿರುದು ಹೊಂದಿದ್ದ ರಂಜಿತ್‌ ಸಿಂಗ್‌
Last Updated 6 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಲಂಡನ್‌: 19ನೇ ಶತಮಾನದಲ್ಲಿ ಸಿಖ್‌ ಸಾಮ್ರಾಜ್ಯದ ಆಳ್ವಿಕೆ ನಡೆಸಿದ್ದ ಮಹಾರಾಜ ರಂಜಿತ್‌ ಸಿಂಗ್‌ ಅವರಿಗೆ ವಿಶ್ವದ ಅತಿ ಶ್ರೇಷ್ಠ ನಾಯಕ ಎಂಬ ಬಿರುದು ನೀಡಲಾಗಿದೆ.

‘ಬಿಬಿಸಿ ವರ್ಲ್ಡ್‌ ಹಿಸ್ಟರೀಸ್‌’ ನಿಯತಕಾಲಿಕ ನಡೆಸಿದ ಜನಾಭಿಪ್ರಾಯದಲ್ಲಿ ವಿಶ್ವದ ವಿವಿಧೆಡೆಗಳಿಂದ ನಾಮನಿರ್ದೇಶನಗೊಂಡ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ರಂಜಿತ್‌ ಸಿಂಗ್‌ ಈ ಬಿರುದು ಪಡೆದಿದ್ದಾರೆ. ಜನಾಭಿಪ್ರಾಯದಲ್ಲಿ 5 ಸಾವಿರಕ್ಕೂ ಅಧಿಕ ಜನರು ಮತವನ್ನು ಹಾಕಿದ್ದು, ಶೇ 38ಕ್ಕಿಂತ ಅಧಿಕ ಮತ ಸಿಂಗ್‌ ಅವರಿಗೆ ದೊರಕಿವೆ. ‘ಸಹಿಷ್ಣುತೆಯ ಸಾಮ್ರಾಜ್ಯ’ ರಚಿಸಿದ್ದ ಸಿಂಗ್‌ ಅವರ ಆಳ್ವಿಕೆಯನ್ನು ಜನ ಶ್ಲಾಘಿಸಿದ್ದಾರೆ.

ನಾಮನಿರ್ದೇಶನ: ಮಾಥ್ಯೂ ಲಾಕ್‌ವುಡ್‌, ರಾಣಾ ಮಿತ್ತರ್‌, ಮಾರ್ಗರೆಟ್‌ ಮ್ಯಾಕ್‌ ಮಿಲನ್‌ ಸೇರಿದಂತೆವಿಶ್ವದ ಪ್ರಮುಖ ಇತಿಹಾಸಕಾರರು ‘ಶ್ರೇಷ್ಠ ನಾಯಕರನ್ನು’ ನಾಮನಿರ್ದೇಶನ ಮಾಡಿದ್ದರು. ಇವರು ಆಯ್ಕೆ ಮಾಡಿದ 20 ನಾಯಕರ ಪೈಕಿ ಮೊಗಲ್‌ ಸಾಮ್ರಾಜ್ಯದ ಅಕ್ಬರ್‌, ಫ್ರಾನ್ಸ್‌ನ ಸೇನಾ ನಾಯಕ ಜಾನ್‌ ಆಫ್‌ ಆರ್ಕ್‌ ಮುಂತಾದವರು ಇದ್ದರು. ಸಿಂಗ್‌ ಅವರ ಹೆಸರನ್ನು ಅಲಬಾಮಾ ವಿಶ್ವವಿದ್ಯಾಲಯದಲ್ಲಿ ಇತಿಹಾಸದ ಪ್ರಾಧ್ಯಾಪಕರಾಗಿರುವಲಾಕ್‌ವುಡ್‌ ನಾಮ ನಿರ್ದೇಶನ ಮಾಡಿದ್ದರು.

‘ಪಟ್ಟಿಯಲ್ಲಿದ್ದ ಇತರ ನಾಯಕರಷ್ಟು ಪರಿಚಿತರಲ್ಲದಿದ್ದರೂ, ರಂಜಿತ್‌ ಸಿಂಗ್‌ ಅವರು ಜನಾಭಿಪ್ರಾಯದಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ’ ಎಂದು ನಿಯತಕಾಲಿಕದ ಸಂಪಾದಕ ಮ್ಯಾಟ್‌ ಎಲ್ಟನ್‌ ಹೇಳಿದರು.

ಯಾರು ಯಾವ ಸ್ಥಾನದಲ್ಲಿ?

ರಂಜಿತ್‌ ಸಿಂಗ್‌ ನಂತರಎರಡನೇ ಸ್ಥಾನದಲ್ಲಿ ಆಫ್ರಿಕಾದ ಸ್ವಾತಂತ್ರ್ಯ ಹೋರಾಟಗಾರ ಅಮಿಲ್ಕರ್‌ ಕ್ಯಾಬ್ರಲ್‌ ಅವರಿದ್ದು, ಶೇ 25ರಷ್ಟು ಮತಗಳನ್ನು ಪಡೆದಿದ್ದಾರೆ.ಬ್ರಿಟನ್‌ನ ಮಾಜಿ ಪ್ರಧಾನಿ ವಿನ್‌ಸ್ಟನ್‌ ಚರ್ಚಿಲ್‌ ಮೂರನೇ ಸ್ಥಾನ ಪಡೆದಿದ್ದಾರೆ. ಇವರಿಗೆ ಶೇ 7 ಮತಗಳು ದೊರಕಿವೆ. ನಾಲ್ಕನೇ ಸ್ಥಾನದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಅಬ್ರಹಾಂ ಲಿಂಕನ್‌ ಇದ್ದು, ಮೊದಲನೇ ಎಲಿಜಬೆತ್‌ಗೆ ಐದನೇ ಸ್ಥಾನ ದೊರಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT