ಕಾಂಡೋಮ್‌ ಜಾಹೀರಾತಿಗೆ ರಣವೀರ್‌ ಬೈ

ಶುಕ್ರವಾರ, ಏಪ್ರಿಲ್ 26, 2019
33 °C

ಕಾಂಡೋಮ್‌ ಜಾಹೀರಾತಿಗೆ ರಣವೀರ್‌ ಬೈ

Published:
Updated:
Prajavani

ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಅವರು ಜಾಹೀರಾತು ಕಂಪನಿಗಳು ಮತ್ತು ಬ್ರ್ಯಾಂಡ್‌ಗಳ ಕಣ್ಮಣಿ. ಹತ್ತಾರು ಜಾಹೀರಾತುಗಳಲ್ಲಿ ಅವರು ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಕಾಂಡೋಮ್‌ ಕುರಿತ ಜಾಹೀರಾತಿನಲ್ಲಿ ಕಾಣಿಸಿಕೊಂಡ ಬಾಲಿವುಡ್‌ನ ಮೊದಲ ನಟ ಎನ್ನುವುದು ರಣವೀರ್ ಹೆಗ್ಗಳಿಕೆ. 

ಈಗ ರಣವೀರ್‌ ಹೊಸ ಸುದ್ದಿ ಕೊಟ್ಟಿದ್ದಾರೆ. 2014ರಿಂದಲೂ ‘ಡ್ಯುರೆಕ್ಸ್‌’ ಎಂಬ ಕಾಂಡೋಮ್‌ ಕಂಪನಿಯ ರಾಯಭಾರಿಯಾಗಿ ಜಾಹೀರಾತು ಒಪ್ಪಂದ ಮಾಡಿಕೊಂಡಿದ್ದ ರಣವೀರ್‌ ಇದೀಗ ಒಪ್ಪಂದ ಕೈಬಿಟ್ಟಿದ್ದಾರೆ. ಅವರ ಈ ತೀರ್ಮಾನ ಸಾಮಾಜಿಕ ಮಾಧ್ಯಮದಲ್ಲಿ ಬಾರಿ ಸಂಚಲವನ್ನೇ ಸೃಷ್ಟಿಸಿದೆ. ಸುರಕ್ಷಿತ ಲೈಂಗಿಕ ಸಂಪರ್ಕದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ‘ಡ್ಯುರೆಕ್ಸ್‌’ನ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿ ಅವರು ಹೇಳಿಕೊಂಡಿದ್ದರು. 

ರಣವೀರ್‌ ನಿರ್ಧಾರಕ್ಕೆ ಕಾರಣವೇನು ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಮಂದಿ ಕುತೂಹಲ ವ್ಯಕ್ತಪಡಿಸಿದ್ದಾರೆ. ಎವರ್‌ಗ್ರೀನ್‌ ಬ್ಯೂಟಿ ದೀಪಿಕಾ ಪಡುಕೋಣೆ ಜತೆ ಮದುವೆಯಾದ ಕಾರಣ ಅವರು ಈ ತೀರ್ಮಾನ ಕೈಗೊಂಡಿರುವುದಾಗಿ ಬಹಳಷ್ಟು ಮಂದಿ ಸಂದೇಹ ವ್ಯಕ್ತಪಡಿಸಿದ್ದಾರೆ. ಆದರೆ ಬಿ ಟೌನ್‌ನ ಮುಂಚೂಣಿ ನಟನಿಗೆ ದುಬಾರಿ ಶುಲ್ಕ ಪಾವತಿಸಿ ಗುತ್ತಿಗೆ ಮುಂದುವರಿಸಲು ಡ್ಯುರೆಕ್ಸ್‌ ಇಂಡಿಯಾ ಕಂಪನಿ ಮನಸ್ಸು ಮಾಡಿಲ್ಲ ಎಂದು ಹೇಳಲಾಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !