ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಪ್ರಾಂಶುಪಾಲ, ಮಗ ಬಂಧನ

7
ಆರು ತಿಂಗಳಿಂದ ಲೈಂಗಿಕ ದೌರ್ಜನ್ಯ

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಪ್ರಾಂಶುಪಾಲ, ಮಗ ಬಂಧನ

Published:
Updated:

ಪಟ್ನಾ:  ಹತ್ತನೇ ತರಗತಿ ವಿದ್ಯಾರ್ಥಿನಿ ಮೇಲೆ ಪ್ರಾಂಶುಪಾಲ ಮತ್ತು ಅವರ ಪುತ್ರ ಹಾಗೂ ಇಬ್ಬರು ಶಿಕ್ಷಕರು ಸೇರಿದಂತೆ ಇತರ 16 ವಿದ್ಯಾರ್ಥಿಗಳು ಆರು ತಿಂಗಳಿಂದ ಅತ್ಯಾಚಾರವೆಸಗಿರುವ ಹೇಯ ಕೃತ್ಯ ಬಿಹಾರದ ಸಾರನ್‌ ಜಿಲ್ಲೆಯಲ್ಲಿ ನಡೆದಿದೆ.

ಪ್ರಾಂಶುಪಾಲರ ಪುತ್ರ ವಿದ್ಯಾರ್ಥಿನಿಯ ಸಹಪಾಠಿ.  ಕಳೆದ ಡಿಸೆಂಬರ್‌ ತಿಂಗಳಿಂದ ಈ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಆರಂಭವಾಯಿತು. ತನ್ನ ಸ್ನೇಹಿತರ ಜತೆಗೂಡಿ ಪ್ರಾಂಶುಪಾಲರ ಪುತ್ರ ಶಾಲೆಯ ಶೌಚಾಲಯದಲ್ಲಿ ಸಾಮೂಹಿಕ ಅತ್ಯಾಚಾರವೆಸಗಿದ್ದ. ಈ ಕೃತ್ಯವನ್ನು ವಿಡಿಯೊ ಚಿತ್ರೀಕರಣ ಮಾಡಿದ್ದ ಆರೋಪಿಗಳು ಕೆಲ ದಿನಗಳ ಬಳಿಕ ವಿದ್ಯಾರ್ಥಿನಿಗೆ ಬ್ಲ್ಯಾಕ್‌ಮೇಲ್‌ ಮಾಡಲು ಬಳಸಿಕೊಂಡರು.

ವಿದ್ಯಾರ್ಥಿನಿಯು ಶೌಚಾಲಯದಿಂದ ಹೊರಬರುವಾಗ ಶಾಲಾ ಸಮವಸ್ತ್ರದ ಮೇಲೆ ರಕ್ತದ ಕಲೆಗಳನ್ನು ಗಮನಿಸಿದ ಪ್ರಾಂಶುಪಾಲ ಘಟನೆ ಬಗ್ಗೆ ವಿಚಾರಿಸಿದ. ಈ ವಿಷಯವನ್ನು ಬಹಿರಂಗಪಡಿಸದಂತೆ ಬೆದರಿಸಿದ್ದ.

ಈ ಘಟನೆ ಬಳಿಕ 10 ದಿನಗಳ ಕಾಲ ಗೈರುಹಾಜರಾಗಿದ್ದ ವಿದ್ಯಾರ್ಥಿನಿ ಮತ್ತೆ  ಬಂದಾಗ ಪ್ರಾಂಶುಪಾಲ ತನ್ನ ಕಚೇರಿಗೆ ಕರೆಯಿಸಿಕೊಂಡು ವಿಡಿಯೊ ತೋರಿಸಿ ಬೆದರಿಕೆ ಹಾಕಿ ಎರಡು ಬಾರಿ ಅತ್ಯಾಚಾರವೆಸಗಿದ. ಇಬ್ಬರು ಶಿಕ್ಷಕರು ಸೇರಿದಂತೆ 16 ವಿದ್ಯಾರ್ಥಿಗಳು ಸಹ ವಿಡಿಯೊ ಮುಂದಿಟ್ಟುಕೊಂಡು ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !