ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಸಿದ್ಧವಾಗುತ್ತಿದೆ ವೇದಿಕೆ 

Last Updated 23 ಮೇ 2019, 4:39 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭಾಚುನಾವಣೆ ಫಲಿತಾಂಶ ಪ್ರಕಟವಾಗುವ ಮುನ್ನವೇ ಪ್ರಮಾಣ ವಚನಸ್ವೀಕಾರಕ್ಕಾಗಿ ವೇದಿಕೆ ಸಿದ್ಧವಾಗುತ್ತಿದೆ. ರಾಷ್ಟ್ರಪತಿ ಭವನದಲ್ಲಿ ಈ ವೇದಿಕೆ ಸಿದ್ಧವಾಗುತ್ತಿದ್ದು, ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಿರುವ ಅತಿಥಿಗಳ ಪಟ್ಟಿಯೂ ತಯಾರಾಗಿದೆ.

ಫಲಿತಾಂಶ ಪ್ರಕಟವಾದ ನಂತರವೇ ಪ್ರಮಾಣ ವಚನಸ್ವೀಕಾರದ ದಿನಾಂಕ ನಿಗದಿಪಡಿಸಲಾಗುವುದು.ಹೊಸ ಸದಸ್ಯರನ್ನು ಸ್ವಾಗತಿಸುವುದಕ್ಕಾಗಿ ಲೋಕಸಭಾ ಕಾರ್ಯಾಲಯವು ಸಿದ್ಧತೆ ಆರಂಭಿಸಿದೆ ಎಂದು ಸೆಕ್ರಟರಿ ಜನರಲ್ ಸ್ನೇಹಲತಾ ಶ್ರೀವಾಸ್ತವ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.ದೆಹಲಿ ವಿಮಾನ ನಿಲ್ದಾಣದಲ್ಲಿ ಮತ್ತು ರೇಲ್ವೆ ನಿಲ್ದಾಣದಲ್ಲಿಯೂ ಸಹಾಯಕ್ಕಾಗಿ ಸಿದ್ಧತೆ ನಡೆದಿದೆ.

ಸಂಸದರಿಗೆ ಪಂಚತಾರಾ ಹೋಟೆಲ್ ಸೌಕರ್ಯ ಇಲ್ಲ
ಈ ಬಾರಿ ಹೊಸ ಸಂಸದರಿಗೆ ವಾಸ್ತವ್ಯ ಹೂಡಲು ಪಂಚತಾರಾ ಹೋಟೆಲ್‌ಗಳನ್ನು ನೀಡುವುದಿಲ್ಲ. ಸಂಸದರನ್ನು ಜನಪಥ್ ರಸ್ತೆಯಲ್ಲಿರುವ ವೆಸ್ಟೋನ್ ಕೋರ್ಟ್ಮತ್ತು ವಿವಿಧ ರಾಜ್ಯಗಳ ಅತಿಥಿ ಭವನಗಳಲ್ಲಿಯೂ ವಾಸ್ತವ್ಯಕ್ಕಾಗಿ ವ್ಯವಸ್ಥೆ ಮಾಡಲಾಗುವುದು ಎಂದು ಲೋಕಸಭಾ ಸೆಕ್ರಟರಿ ಜನರಲ್ ಹೇಳಿದ್ದಾರೆ. ಎಲ್ಲ ಸೌಕರ್ಯವಿರುವ 300ರಷ್ಟು ಕೋಣೆಗಳನ್ನು ಸಂಸದರಿಗಾಗಿ ಸಜ್ಜು ಮಾಡಲಾಗಿದೆ.2014ರಲ್ಲಿ 300ಕ್ಕಿಂತ ಹೆಚ್ಚು ಸಂಸದರು ಆಯ್ಕೆಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT