9.30ಕ್ಕೆ ಕಚೇರಿಯಲ್ಲಿರಿ, ಮನೆಯಿಂದ ಕೆಲಸ ಮಾಡುವುದು ಬಿಡಿ: ಸಚಿವರಿಗೆ ಮೋದಿ ಸೂಚನೆ

ಬುಧವಾರ, ಜೂನ್ 26, 2019
23 °C

9.30ಕ್ಕೆ ಕಚೇರಿಯಲ್ಲಿರಿ, ಮನೆಯಿಂದ ಕೆಲಸ ಮಾಡುವುದು ಬಿಡಿ: ಸಚಿವರಿಗೆ ಮೋದಿ ಸೂಚನೆ

Published:
Updated:

ನವದೆಹಲಿ: ಎನ್‌ಡಿಎ ಸರ್ಕಾರ ಮರಳಿ ಅಧಿಕಾರಕ್ಕೆ ಬಂದ ನಂತರ ಬುಧವಾರ ಮೊದಲ ಬಾರಿಗೆ ಮಂತ್ರಿ ಪರಿಷತ್‌ನ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಸಚಿವದ್ವಯರಿಗೆ ಹಲವು ಕಟ್ಟಳೆಗಳನ್ನು ವಿಧಿಸಿದ್ದಾರೆ. 

ಸಮಯ ಪಾಲನೆಯ ಅಗತ್ಯದ ಬಗ್ಗೆ ಅವರು ನೀತಿ ಬೋಧೆ ಮಾಡಿದ್ದಾರೆ. ಸಮಯಕ್ಕೆ ಸರಿಯಾಗಿ ಕಚೇರಿಗೆ ಬರಬೇಕು, 9.30ಕ್ಕೇ ಕಚೇರಿಯಲ್ಲಿರಬೇಕು, ಮನೆಯಿಂದ ಕೆಲಸ ಮಾಡುವ ಪರಿಪಾಠವನ್ನು ನಿಲ್ಲಿಸಬೇಕು, ಕಚೇರಿಗೆ ಬರುವ ಅಗತ್ಯತೆಯನ್ನು ಸಚಿವರು ಅರಿಯಬೇಕು ಎಂದು ಇಡೀ ಮಂತ್ರಿ ಮಂಡಲಕ್ಕೆ ತಾಕೀತು ಮಾಡಿದ್ಧಾರೆ. 

ಪ್ರತಿ ಇಲಾಖೆಯ ಉತ್ಪಾದನೆಯನ್ನು ಉತ್ತೇಜಿಸಲು ಸಂಪುಟ ದರ್ಜೆ ಸಚಿವರು ಮುಖ್ಯ ಕಡತಗಳನ್ನು ರಾಜ್ಯ ಖಾತೆ ಸಚಿವರ ಬಳಿಯೂ ಹಂಚಿಕೊಳ್ಳಬೇಕು ಎಂದು ಮೋದಿ ಸಲಹೆ ನೀಡಿದ್ದಾರೆ. 

ಸಂಸದೀಯ ಕಲಾಪಗಳು ನಡೆಯುವ ಹೊತ್ತಲ್ಲಿ ಸಚಿವರು ಹೊರದೇಶಗಳಿಗೆ ತೆರಳುವ ಯಾವುದೇ ಕಾರ್ಯಕ್ರಮಗಳನ್ನು ನಿಗದಿಮಾಡಿಕೊಳ್ಳಬಾರದು ಎಂದು ಮೋದಿ ಸೂಚನೆ ನೀಡಿದ್ದಾರೆ ಎಂದು ಆಂಗ್ಲ ವೆಬ್‌ಸೈಟ್‌ india.com ವರದಿ ಮಾಡಿದೆ. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 32

  Happy
 • 2

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !