ನೀರವ್‌ ಮೋದಿ ಬಂಧನ ಸನ್ನಿಹಿತ‌?

7

ನೀರವ್‌ ಮೋದಿ ಬಂಧನ ಸನ್ನಿಹಿತ‌?

Published:
Updated:
ನೀರವ್

ನವದೆಹಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ (ಪಿಎನ್‌ಬಿ) ವಂಚಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ವಜ್ರಾಭರಣ ಉದ್ಯಮಿ ನೀರವ್‌ ಮೋದಿ ವಿರುದ್ಧ ಇಂಟರ್‌ಪೋಲ್‌ ರೆಡ್‌ ಕಾರ್ನರ್‌ ನೋಟಿಸ್‌ ಜಾರಿ ಮಾಡಿದೆ.

ಜೂನ್‌ 29ರಂದು ನೋಟಿಸ್‌ ಜಾರಿ ಯಾಗಿದ್ದು ಇಂಟರ್‌ಪೋಲ್‌ ಈ ವಿಷಯ ಸೋಮವಾರ ಬಹಿರಂಗಗೊಳಿಸಿದೆ.

ನೀರವ್‌ ಸಹೋದರ ನಿಶಾಲ್‌ ಮೋದಿ, ನೀರವ್‌ ಸಂಸ್ಥೆಯ ಅಧಿಕಾರಿ ಸುಭಾಷ್‌ ಪರಬ್‌ ವಿರುದ್ಧವೂ ರೆಡ್‌ ಕಾರ್ನರ್‌ ನೋಟಿಸ್‌ ಹೊರಡಿಸಲಾಗಿದೆ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ₹13 ಸಾವಿರ ಕೋಟಿ ವಂಚನೆ ಪ್ರಕರಣ ಬೆಳಕಿಗೆ ಬರುವ ಮೊದಲೇ ಆರೋಪಿಗಳು ವಿದೇಶಕ್ಕೆ ಪರಾರಿಯಾಗಿದ್ದಾರೆ. ಹಾಗಾಗಿ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ, ನೆರವು ಕೋರಿ ಇಂಟರ್‌ಪೋಲ್‌ ಮೊರೆ ಹೋಗಿತ್ತು.

ಇದಕ್ಕೂ ಮೊದಲು ಆರೋಪಿಗಳ ವಿರುದ್ಧ ಮುಂಬೈ ವಿಶೇಷ ನ್ಯಾಯಾಲಯಕ್ಕೆ ಸಿಬಿಐ ಆರೋಪಪಟ್ಟಿ ಸಲ್ಲಿಸಿತ್ತು. ನೀರವ್‌, ಸಂಬಂಧಿ ಚೋಕ್ಸಿ ಸೇರಿ ಇತರ ಆರೋಪಿಗಳ ವಿರುದ್ಧ ನ್ಯಾಯಾಲಯ ಬಂಧನ ವಾರಂಟ್‌ ಹೊರಡಿಸಿತ್ತು.

‘ನೀರವ್‌ ಮತ್ತು ಮೆಹುಲ್‌ ಚೋಕ್ಸಿ ಜೋಡಿ ಲಂಡನ್‌, ಸಿಂಗಪುರ, ಹಾಂಕಾಂಗ್‌ ಮಧ್ಯೆ ರಾಜಾರೋಷವಾಗಿ ಓಡಾಡಿಕೊಂಡಿದೆ’ ಎಂದು ಬ್ರಿಟನ್‌ ಮಾಧ್ಯಮಗಳು ವರದಿ ಮಾಡಿದ್ದವು.

ಪಿಎನ್‌ಬಿ ಹಗರಣ ಹೊರಬೀಳುವ ಸ್ವಲ್ಪ ದಿನ ಮೊದಲೇ ನೀರವ್‌, ಪತ್ನಿ ಅಮಿ ಮೋದಿ, ನಿಶಾಲ್‌ ಮೋದಿ, ಮೆಹುಲ್‌ ಚೋಕ್ಸಿ ದೇಶ ತೊರೆದಿದ್ದರು.

ಮುಖ್ಯಾಂಶಗಳು

* ಜನವರಿಯಲ್ಲಿ ದೇಶ ತೊರೆದಿರುವ ನೀರವ್‌, ಪತ್ನಿ ಅಮಿ ಮೋದಿ, ಸಹೋದರ ನಿಶಾಲ್‌ ಮೋದಿ, ಸಂಬಂಧಿ ಮೇಹುಲ್‌ ಚೋಕ್ಸಿ

* ಭಾರತಕ್ಕೆ ಹಿಂದಿರುಗಲು ನೀರವ್‌, ಚೋಕ್ಸಿ ನಕಾರ

* ನೀರವ್‌ ಪಾಸ್‌ಪೋರ್ಟ್‌ ರದ್ದು ಮಾಡಿರುವ ಸರ್ಕಾರ

* ನೀರವ್‌ ಎಲ್ಲ ಐದು ಪಾಸ್‌ಪೋರ್ಟ್‌ಗಳ ಬಗ್ಗೆ 192 ರಾಷ್ಟ್ರಗಳಿಗೆ ಇಂಟರ್‌ಪೋಲ್‌ ಮಾಹಿತಿ ರವಾನೆ

 

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !