ಗುರುವಾರ , ನವೆಂಬರ್ 14, 2019
18 °C

ನೀರವ್‌ ಸಹೋದರ ನೇಹಲ್‌ ವಿರುದ್ಧ ‘ರೆಡ್‌ ಕಾರ್ನರ್‌ ನೋಟಿಸ್‌’

Published:
Updated:
Prajavani

ನವದೆಹಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕಿಗೆ ₹ 14 ಸಾವಿರ ಕೋಟಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿಂತೆ ವಜ್ರ ವ್ಯಾಪಾರಿ ನೀರವ್‌ ಮೋದಿ ಸಹೋದರ ನೇಹಲ್‌ ವಿರುದ್ಧ ಇಂಟರ್‌ಪೋಲ್‌ ‘ರೆಡ್‌ ಕಾರ್ನರ್‌ ನೋಟಿಸ್‌’ ಹೊರಡಿಸಿದೆ.

ಹಣ ಅಕ್ರಮ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ತನಿಖೆ ನಡೆಸುತ್ತಿದೆ. ಬೆಲ್ಜಿಯಂ ಪ್ರಜೆಯಾಗಿರುವ ನೆಹಲ್‌ಗೆ ಇ.ಡಿ ಮನವಿ ಮೇರೆಗೆ ಈ ನೋಟಿಸ್‌ ನೀಡಲಾಗಿದೆ.

ಪ್ರತಿಕ್ರಿಯಿಸಿ (+)