ರಾಜೀವ್ ಹಂತಕರ ಬಿಡುಗಡೆಗೆ ತಮಿಳುನಾಡು ಸಚಿವ ಸಂಪುಟ ಶಿಫಾರಸು

7

ರಾಜೀವ್ ಹಂತಕರ ಬಿಡುಗಡೆಗೆ ತಮಿಳುನಾಡು ಸಚಿವ ಸಂಪುಟ ಶಿಫಾರಸು

Published:
Updated:

ಚೆನ್ನೈ: ರಾಜೀವ್ ಗಾಂಧಿ ಹಂತಕರನ್ನು ಬಿಡುಗಡೆ ಮಾಡುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಲು ತಮಿಳುನಾಡು ಸಚಿವ ಸಂಪುಟವು ನಿರ್ಧರಿಸಿದೆ.

ಅವಧಿಪೂರ್ವ ಬಿಡುಗಡೆಗೆ ಹಂತಕ ಎ.ಜಿ.ಪೇರರಿವಾಳನ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ‘ಈ ಪ್ರಕರಣದಲ್ಲಿ ಸಂಬಂಧಿತ ಸಂಸ್ಥೆಯು ನಿರ್ಧಾರ ತೆಗೆದುಕೊಳ್ಳಲು ಸ್ವತಂತ್ರ್ಯವಾಗಿದೆ’ ಎಂದು ಸುಪ್ರೀಂ ಕೋರ್ಟ್ ಹಿಂದಿನ ವಾರವಷ್ಟೇ ಹೇಳಿತ್ತು. ಅದರ ಬೆನ್ನಲ್ಲೇ ತಮಿಳುನಾಡು ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.

‘ಹತ್ಯೆಯಲ್ಲಿ ಇವರ ಪಾತ್ರ ತೀರಾ ಚಿಕ್ಕದು ಎಂಬುದು ರಾಜ್ಯದ ಜನರ ಅಭಿಪ್ರಾಯ. ಅವರ ಬಿಡುಗಡೆಗೆ ಜನರು ಒತ್ತಾಯಿಸುತ್ತಿದ್ದಾರೆ. ಇದು ಅತ್ಯಂತ ಸೂಕ್ಷ್ಮ ಮತ್ತು ತುರ್ತು ವಿಚಾರ. ಹೀಗಾಗಿಯೇ ಇಂದು ಭಾನುವಾರವಾದರೂ, ಸಂಪುಟ ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹಂತಕರ ಬಿಡುಗಡೆಗೆ ಸಂವಿಧಾನದ 161ನೇ ವಿಧಿಯಲ್ಲಿ ಅವಕಾಶವಿದೆ. ಸಂಪುಟದ ಶಿಫಾರಸನ್ನು ರಾಜ್ಯಪಾಲರಿಗೆ ಶೀಘ್ರವೇ ತಲುಪಿಸಲಾಗುತ್ತದೆ. ರಾಜ್ಯಪಾಲರು ತಕ್ಷಣವೇ ಆದೇಶ ಹೊರಡಿಸಬೇಕು’ ಎಂದು ತಮಿಳುನಾಡಿ ಮೀನುಗಾರಿಕಾ ಸಚಿವ ಡಿ.ಜಯಕುಮಾರ್ ಹೇಳಿದ್ದಾರೆ.

ಈ ಪ್ರಕರಣದಲ್ಲಿ ಏಳು ಜನರು 27 ವರ್ಷಗಳಿಂದ ಜೈಲುಶಿಕ್ಷೆ ಅನುಭವಿಸುತ್ತಿದ್ದಾರೆ.

‘ನಮ್ಮ ತಂದೆಯ ಹಂತಕರನ್ನು ನಾವು ಯಾವಾಗಲೋ ಕ್ಷಮಿಸಿಬಿಟ್ಟಿದ್ದೇವೆ’ ಎಂದು ದಿವಂಗತ ರಾಜೀವ್ ಗಾಂಧಿ ಅವರ ಮಕ್ಕಳಾದ ಪ್ರಿಯಾಂಕ ಗಾಂಧಿ ಮತ್ತು ರಾಹುಲ್ ಗಾಂಧಿ ಈ ಹಿಂದೆಯೇ ಹೇಳಿದ್ದರು.

ಆದರೆ ಹಂತಕರನ್ನು ಬಿಡುಗಡೆ ಮಾಡುವುದು ಸಾಧ್ಯವೇ ಇಲ್ಲ ಎಂದು ಕೇಂದ್ರ ಸರ್ಕಾರವು ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್‌ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಿತ್ತು.

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !