ಶನಿವಾರ, ಜುಲೈ 24, 2021
25 °C

ರಿಲಯನ್ಸ್ ಸಾಲಮುಕ್ತ: ಮುಕೇಶ್‌ ಅಂಬಾನಿ‌ ಘೋಷಣೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ತೈಲ ಸಂಸ್ಕರಣೆ, ಟೆಲಿಕಾಂ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಛಾಪು ಮೂಡಿಸಿರುವ ರಿಲಯನ್ಸ್‌ ಇಂಡಸ್ಟ್ರೀಸ್‌‌ ಈಗ ಸಾಲ ಮುಕ್ತವಾಗಿದೆ ಎಂದು ಕಂಪನಿಯ ಮುಖ್ಯಸ್ಥ ಮುಕೇಶ್‌ ಅಂಬಾನಿ ಶುಕ್ರವಾರ ಘೋಷಿಸಿದ್ದಾರೆ.

‘ಕಳೆದ ಮಾರ್ಚ್‌ 31ಕ್ಕೆ ಕಂಪನಿಯ ಸಾಲ ₹ 1,61,035 ಕೋಟಿ ಇತ್ತು. ಕಳೆದ ಎರಡು ತಿಂಗಳ ಅವಧಿಯಲ್ಲಿ ಜಾಗತಿಕ ಹೂಡಿಕೆದಾರರು ದಾಖಲೆಯ ₹ 1.69 ಕೋಟಿ ಬಂಡವಾಳ ತೊಡಗಿಸಿದ್ದರಿಂದ ಕಂಪನಿ ಈಗ ಋಣಮುಕ್ತವಾಗಿದೆ’ ಎಂದು ಅವರು ತಿಳಿಸಿದ್ದಾರೆ.

‘ಮುಂದಿನ ವರ್ಷದ ಮಾರ್ಚ್‌ 31ರ ಒಳಗಾಗಿ ಕಂಪನಿಯನ್ನು ಸಾಲಮುಕ್ತ ಮಾಡಲಾಗುವುದು ಎಂದು ಷೇರುದಾರರಿಗೆ ಭರವಸೆ ನೀಡಿದ್ದೆ. ಈ ಗಡುವಿನೊಳಗಾಗಿ ನಾನು ನೀಡಿದ್ದ ಭರವಸೆಯನ್ನು ಈಡೇರಿಸಿದ್ದೇನೆ’ ಎಂದೂ ಮುಕೇಶ್‌ ತಿಳಿಸಿದ್ದಾರೆ. 

ರಿಲಯನ್ಸ್‌ನ ಅಂಗಸಂಸ್ಥೆಯಾಗಿರುವ ಜಿಯೊ ಪ್ಲಾಟ್‌ಫಾರ್ಮ್ಸ್‌ನ ಕಾಲುಭಾಗ ಷೇರುಗಳನ್ನು ಮಾರಾಟ ಮಾಡುವ ಮೂಲಕ ಕಂಪನಿ ₹ 1.15 ಲಕ್ಷ ಕೋಟಿ ಸಂಗ್ರಹಿಸಿದೆ. ಕಳೆದ 58 ದಿನಗಳ ಅವಧಿಯಲ್ಲಿ ಹಕ್ಕಿನ ಷೇರುಗಳ ಮಾರಾಟದಿಂದ ₹ 53,124.20 ಕೋಟಿ ಸಂಗ್ರಹಿಸಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು