ಸರ್ಕಾರ ರಫೇಲ್ ಗುತ್ತಿಗೆ ನೀಡಿಲ್ಲ

7

ಸರ್ಕಾರ ರಫೇಲ್ ಗುತ್ತಿಗೆ ನೀಡಿಲ್ಲ

Published:
Updated:

ನವದೆಹಲಿ: ‘ರಫೇಲ್ ವಿಮಾನ ಖರೀದಿಗೆ ಸಂಬಂಧಿಸಿದಂತೆ ರಕ್ಷಣಾ ಸಚಿವಾಲಯವು ನಮಗೆ ಯಾವುದೇ ಗುತ್ತಿಗೆ ನೀಡಿಲ್ಲ’ ಎಂದು ರಿಲಯನ್ಸ್ ಡಿಫೆನ್ಸ್ ಮತ್ತೆ ಸ್ಪಷ್ಟನೆ ನೀಡಿದೆ.

ಉದ್ಯಮಿ ಅನಿಲ್ ಅಂಬಾನಿ ಅವರಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಸರ್ಕಾರವು ರಿಲಯನ್ಸ್ ಡಿಫೆನ್ಸ್‌ ಕಂಪನಿಗೆ ರಫೇಲ್‌ ಗುತ್ತಿಗೆಯನ್ನು ನೀಡಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಹೀಗಾಗಿಯೇ ಕಂಪನಿಯು ಎರಡನೇ ಬಾರಿ ಸ್ಪಷ್ಟನೆ ನೀಡಿದೆ.

‘ರಫೇಲ್ ಒಪ್ಪಂದವು ಎರಡು ಸರ್ಕಾರಗಳ ನಡುವಣ ಒಪ್ಪಂದವಾಗಿದೆ. ಡಸಾಲ್ಟ್ ಮತ್ತು ನಮ್ಮ ಕಂಪನಿ ಸೇರಿ ‘ಡಸಾಲ್ಟ್ ರಿಲಯನ್ಸ್ ಏರೊಸ್ಪೇಸ್ ಲಿಮಿಟೆಡ್‌’ ಅನ್ನು ಆರಂಭಿಸಿದ್ದೇವೆ. ಈ ಕಂಪನಿಯಲ್ಲಿ ನಮ್ಮದು ಶೇ 51 ಮತ್ತು ಡಸಾಲ್ಟ್‌ನದ್ದು ಶೇ 49ರಷ್ಟು ಪಾಲುದಾರಿಕೆ. ಎರಡೂ ಕಂಪನಿಗಳ ಸಹಭಾಗಿತ್ವಕ್ಕೂ, ಭಾರತ ಸರ್ಕಾರಕ್ಕೂ ಸಂಬಂಧವಿಲ್ಲ’ ಎಂದು ರಿಲಯನ್ಸ್ ಡಿಫೆನ್ಸ್ ಹೇಳಿದೆ.

‘ಸರ್ಕಾರದ ಒಪ್ಪಂದದ ಪ್ರಕಾರ 36 ಯುದ್ಧವಿಮಾನಗಳೂ ಫ್ರಾನ್ಸ್‌ನಲ್ಲೇ ತಯಾರಾಗಲಿವೆ. ಹೀಗಾಗಿ ಅವನ್ನು ಭಾರತದಲ್ಲಿ ತಯಾರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಹಾಗಿದ್ದ ಮೇಲೆ ವಿಮಾನ ತಯಾರಿಕೆಯ ಅನುಭವ ನಮ್ಮ ಕಂಪನಿಗೆ ಏಕೆ ಬೇಕು’ ಎಂದು ರಿಲಯನ್ಸ್ ಡಿಫೆನ್ಸ್ ಪ್ರಶ್ನಿಸಿದೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !