ಭಾನುವಾರ, ಜೂನ್ 7, 2020
22 °C

ರಾಜೀವ್‌ ಪುಣ್ಯಸ್ಮರಣೆ: ಭಾವನಾತ್ಮಕ ಫೋಟೊ ಟ್ವೀಟ್‌ ಮಾಡಿದ ಪ್ರಿಯಾಂಕ ಗಾಂಧಿ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ:  ಮಾಜಿ ಪ್ರಧಾನಿ, ದಿವಂಗತ ರಾಜೀವ್‌ ಗಾಂಧಿ ಅವರ 29ನೇ ಪುಣ್ಯಸ್ಮರಣೆ ದಿನವಾದ ಇಂದು (ಮೇ 21) ಅವರ ಪುತ್ರಿ ಪ್ರಿಯಾಂಕ ಗಾಂಧಿ ವಾದ್ರಾ ಭಾವನಾತ್ಮಕ ಚಿತ್ರವನ್ನು ಟ್ವೀಟ್‌ ಮಾಡಿದ್ದಾರೆ.  

ತಂದೆ ರಾಜೀವ್‌ ಗಾಂಧಿ ಜೊತೆಗಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ‘ರಾಜೀವ್ ಗಾಂಧಿ ಜೀವಂತವಾಗಿದ್ದಾಗ ತೆಗೆಸಿಕೊಂಡಿದ್ದ ಕೊನೆಯ ಚಿತ್ರ ಇದು‘ ಎಂದು ಪ್ರಿಯಾಂಕ ಗಾಂಧಿ ಟ್ವೀಟ್‌ ಮಾಡಿದ್ದಾರೆ.

 

ಕಾಂಗ್ರೆಸ್ ಮುಖಂಡ ರಾಹುಲ್‌ ಗಾಂಧಿ ಗುರುವಾರ ಟ್ವೀಟ್‌ ಮಾಡುವ ಮೂಲಕ ತಂದೆಯನ್ನು ನೆನಪಿಸಿಕೊಂಡಿದ್ದಾರೆ. ಮೃದು ಸ್ವಭಾವದ, ಕರುಣಾಮಯಿಯಾಗಿದ್ದ ಅವರನ್ನು ನಾನು ತುಂಬಾ ಮಿಸ್‌ ಮಾಡಿಕೊಳ್ಳುತ್ತೇನೆ, ಅವರು ನನ್ನ ಹೃದಯದಲ್ಲಿ ಜೀವಂತವಾಗಿದ್ದಾರೆ. ನನ್ನ ಜೀವನದಲ್ಲಿ ಮರೆಯಲಾರದ ನೆನಪುಗಳಲ್ಲಿ ಅವರು ಒಬ್ಬರು ಎಂದು ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದಾರೆ.

ಇಂದಿರಾ ಗಾಂಧಿ ಹತ್ಯೆ ಬಳಿಕ ದೇಶದ ಪ್ರಧಾನಿಯಾಗಿ ರಾಜೀವ್‌ ಗಾಂಧಿ ಅಧಿಕಾರ ವಹಿಸಿಕೊಂಡರು.  1984 ರಿಂದ 1989 ರವರೆಗೆ ಪ್ರಧಾನಿಯಾಗಿದ್ದರು.  ಅತ್ಯಂತ ಕಿರಿಯ ವಯಸ್ಸಿಗೆ ಪ್ರಧಾನಿಯಾಗಿದ್ದರು. 1991ರ ಮೇ 21ರಂದು ರಾಜೀವ್‌ ಗಾಂಧಿ ಹತ್ಯೆಗೀಡಾದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು