ವರದಿಗಾರಿಕೆ: ಸಮತೋಲನಕ್ಕೆ ‘ಸುಪ್ರೀಂ‘ ಸಲಹೆ

7

ವರದಿಗಾರಿಕೆ: ಸಮತೋಲನಕ್ಕೆ ‘ಸುಪ್ರೀಂ‘ ಸಲಹೆ

Published:
Updated:
ಸುಪ್ರೀಂ ಕೋರ್ಟ್‌

ನವದೆಹಲಿ: ಮಾಧ್ಯಮಗಳ ಸ್ವಾತಂತ್ರ್ಯ ಮತ್ತು ವರದಿಗಾರಿಕೆ ನಡುವೆ ಸಮತೋಲನವಿರಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಸಲಹೆ ಮಾಡಿದೆ.

ಬಿಹಾರದ ಮುಜಫ್ಫರನಗರ ಬಾಲಮಂದಿರ ಅತ್ಯಾಚಾರ ಪ್ರಕರಣ ಕುರಿತ ವರದಿಗಾರಿಕೆಗೆ ಪಟ್ನಾ ಹೈಕೋರ್ಟ್ ತಡೆಯಾಜ್ಞೆ ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ರೀತಿ ಹೇಳಿದೆ.

ಪಟ್ನಾ ಹೈಕೋರ್ಟ್ ಆದೇಶದಿಂದ ಮಾಧ್ಯಮಗಳ ಸ್ವಾತಂತ್ರ್ಯ ಮತ್ತು ಮಾಹಿತಿ ಪಡೆಯುವ ಜನರ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಪತ್ರಕರ್ತೆ ನಿವೇದಿತಾ ಝಾ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠವು ಬಿಹಾರ ಸರ್ಕಾರ ಮತ್ತು ಸಿಬಿಐಗೆ ನೋಟಿಸ್‌ ನೀಡಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !