ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚು ಶೌರ್ಯ ಪ್ರಶಸ್ತಿ ಜಮ್ಮು– ಕಾಶ್ಮೀರದ ಪೊಲೀಸರಿಗೆ

Last Updated 25 ಜನವರಿ 2020, 19:42 IST
ಅಕ್ಷರ ಗಾತ್ರ

ನವದೆಹಲಿ: 71ನೇ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಪೊಲೀಸ್‌ ಶೌರ್ಯ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು,ಜಮ್ಮು ಮತ್ತು ಕಾಶ್ಮೀರದ 108 ಪೊಲೀಸರಿಗೆ ಈ ಪ್ರಶಸ್ತಿ ಲಭಿಸಿದೆ.

ಕೇಂದ್ರೀಯ ಮೀಸಲು ಪೊಲೀಸ್‌ ಪಡೆ(ಸಿಆರ್‌ಪಿಎಫ್‌) ಎರಡನೇ ಸ್ಥಾನದಲ್ಲಿದ್ದು, ಒಟ್ಟು76 ಸಿಬ್ಬಂದಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಒಟ್ಟು 290 ಪ್ರಶಸ್ತಿಗಳ ಪೈಕಿ ಜಮ್ಮು ಕಾಶ್ಮೀರದ ಪೊಲೀಸರೇ ಅತಿ ಹೆಚ್ಚು ಪ್ರಶಸ್ತಿ ಪಡೆದಿದ್ದಾರೆ.ಕಾಶ್ಮೀರದ ಪೊಲೀಸರ ಪೈಕಿ ಮೂವರಿಗೆ ರಾಷ್ಟ್ರಪತಿ ಪೊಲೀಸ್‌ ಶೌರ್ಯ ಪ್ರಶಸ್ತಿ(ಪಿಪಿಎಂಜಿ)ಲಭಿಸಿದೆ.

ಪರಮ ವಿಶಿಷ್ಟ ಸೇವಾ ಪದಕ:ಸೇನೆಯ ಉತ್ತರ ವಿಭಾಗದ ಕಮಾಂಡರ್‌ ಲೆಫ್ಟಿನೆಂಟ್‌ ಜನರಲ್‌ ರಣ್ಬೀರ್‌ ಸಿಂಗ್‌ ಸೇರಿದಂತೆ ಸೇನೆಯ 19 ಹಿರಿಯ ಅಧಿಕಾರಿಗಳಿಗೆ ಪರಮ ವಿಶಿಷ್ಟ ಸೇವಾ ಪದಕವನ್ನು ಘೋಷಿಸಲಾಗಿದೆ.

ಜೊತೆಗೆ ಹುತಾತ್ಮ ಯೋಧ ನಯಿಬ್‌ ಸುಬೇದಾರ್‌ ಸೊಂಬಿರ್‌ಸೇರಿದಂತೆ ಆರು ಸೈನಿಕರಿಗೆ ಶೌರ್ಯ ಚಕ್ರ ಪ್ರಶಸ್ತಿ ಘೋಷಿಸಲಾಗಿದೆ. ಲೆಫ್ಟಿನೆಂಟ್‌ ಕರ್ನಲ್‌ ಜ್ಯೋತಿ ಲಾಮ, ಮೇಜರ್‌ ಕೊನ್‌ಜೆನ್ಗ್‌ಬಾಂ ಬಿಜೇಂದ್ರ ಸಿಂಗ್‌, ನಯಿಬ್‌ ಸುಬೇದಾರ್‌ ನರೇಂದರ್‌ ಸಿಂಗ್‌, ನಾಯಕ್‌ ನರೇಶ್‌ ಕುಮಾರ್‌ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT