ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಶೋಧಕರಿಗೆ ಐಐಎಸ್‌ಸಿಯೇ ಮೆಚ್ಚು

ಪ್ರಧಾನಮಂತ್ರಿ ಸಂಶೋಧನಾ ಫೆಲೊ ಯೋಜನೆಯಡಿ 50 ವಿದ್ಯಾರ್ಥಿಗಳಿಂದ ಅಧ್ಯಯನ
Last Updated 21 ಜುಲೈ 2019, 20:15 IST
ಅಕ್ಷರ ಗಾತ್ರ

ನವದೆಹಲಿ: ಬಹಳಷ್ಟು ಸಂಶೋಧನಾ ವಿದ್ಯಾರ್ಥಿಗಳಿಗೆಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯೇ (ಐಐಎಸ್‌ಸಿ) ಮೊದಲ ಆಯ್ಕೆಯಾಗಿದೆ.ಪ್ರಧಾನಮಂತ್ರಿ ಸಂಶೋಧನಾ ಫೆಲೊ ಯೋಜನೆಗೆ (ಪಿಎಂಆರ್‌ಎಫ್) ಆಯ್ಕೆಯಾದ 119 ವಿದ್ಯಾರ್ಥಿಗಳ ಪೈಕಿ 50 ವಿದ್ಯಾರ್ಥಿಗಳು ಐಐಎಸ್‌ಸಿಯಲ್ಲಿ ಪಿಎಚ್‌.ಡಿ ಪಡೆಯಲು ಮುಂದಾಗಿದ್ದಾರೆ.

50ರ ಪೈಕಿ 10 ಮಂದಿ ವಿಜ್ಞಾನ ಮತ್ತು ಎಂಜಿನಿಯರಿಂಗ್‌ನಲ್ಲಿ ಅಂತರ್‌ ಶಿಸ್ತೀಯ ಪಿಎಚ್‌.ಡಿ ಅಧ್ಯಯನ ಮಾಡಲಿದ್ದಾರೆ. ಏಳು ಮಂದಿ ರಸಾಯನ ವಿಜ್ಞಾನ, ಎಲೆಕ್ಟ್ರಾನಿಕ್ ಎಂಜಿನಿಯರಿಂಗ್‌ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ತಲಾ ಐದು ಮಂದಿ, ಸಿವಿಲ್ ಎಂಜಿನಿ
ಯರಿಂಗ್ ಮತ್ತು ಭೌತಶಾಸ್ತ್ರದಲ್ಲಿ ತಲಾ ನಾಲ್ವರು, ಏರೋಸ್ಪೇಸ್ ಎಂಜಿನಿಯರಿಂಗ್, ಬಯಾಲಜಿಕಲ್ ಸೈನ್ಸ್ ಮತ್ತು ಕಂಪ್ಯೂಟರ್ ಸೈನ್ಸ್‌ನಲ್ಲಿ ತಲಾ ಮೂವರು, ಗಣಿತಶಾಸ್ತ್ರ ಮತ್ತು ಕೆಮಿಕಲ್ ಎಂಜಿನಿಯರಿಂಗ್‌, ಮೆಟೀರಿಯಲ್ ಸೈನ್ಸ್, ಮೆಟಲರ್ಜಿಕಲ್ ಎಂಜಿನಿಯರಿಂಗ್‌ನಲ್ಲಿ ತಲಾ ಇಬ್ಬರು ಸಂಶೋಧನೆ ಕೈಗೊಳ್ಳಲಿದ್ದಾರೆ.

1909ರಲ್ಲಿ ಸ್ಥಾಪನೆಯಾದ ಐಐಎಸ್‌ಸಿ, ವಿಜ್ಞಾನ ಮತ್ತು ಎಂಜಿನಿಯರಿಂಗ್‌ನಲ್ಲಿ ಉನ್ನತ ಶಿಕ್ಷಣ ಮತ್ತು ಸಂಶೋಧನೆಗೆ ದೇಶದಲ್ಲೇ ಹೆಸರುವಾಸಿ.

ಬ್ರಿಟನ್ ಮೂಲದ ಕ್ವಾಕ್ವರೆಲ್ಲಿ ಸೈಮಂಡ್ಸ್ (ಕ್ಯೂಎಸ್‌) ಅಂತರರಾಷ್ಟ್ರೀಯ ರೇಟಿಂಗ್ ಏಜೆನ್ಸಿಯು ಇತ್ತೀಚೆಗೆ ಪ್ರಕಟಿಸಿದ 200 ಜಾಗತಿಕ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಐಐಎಸ್‌ಸಿ 170ನೇ ಸ್ಥಾನ ಪಡೆದಿತ್ತು. ಭಾರತದಲ್ಲಿ ವೈಜ್ಞಾನಿಕ ಮತ್ತು ತಾಂತ್ರಿಕ ಸಂಶೋಧನೆ ಹಾಗೂ ಶಿಕ್ಷಣ ನೀಡುವಲ್ಲಿ ಐಐಎಸ್‌ಸಿ ಪ್ರಧಾನ ಸಂಸ್ಥೆಯಾಗಿದೆ ಎಂದು ಕ್ಯೂಎಸ್‌ ಅಭಿಪ್ರಾಯಪಟ್ಟಿತ್ತು.

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿರಾಷ್ಟ್ರೀಯ ಆದ್ಯತೆಯ ವಿಷಯಗಳಿಗೆ ಒತ್ತು ನೀಡಿ ಸಂಶೋಧನೆ ನಡೆಸಲು ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಮಾನವ ಸಂಪನ್ಮೂಲ ಸಚಿವಾಲಯವು ಕಳೆದ ಫೆಬ್ರುವರಿಯಲ್ಲಿ ವಿಶೇಷ ವಿದ್ಯಾರ್ಥಿವೇತನ ಯೋಜನೆ ಜಾರಿಗೊಳಿಸಿತ್ತು. ಐಐಎಸ್‌ಸಿ, ಐಐಟಿ, ಎನ್‌ಐಟಿ, ಐಐಐಟಿ ಮತ್ತು ಐಐಎಸ್‌ಇಆರ್‌ ಸಂಸ್ಥೆಗಳಲ್ಲಿ ಪಿಎಚ್‌.ಡಿ ಮಾಡಲು ಅವಕಾಶ ನೀಡಲಾಗಿತ್ತು.

24 ವಿದ್ಯಾರ್ಥಿಗಳು ವಿಜ್ಞಾನ ಮತ್ತು ಎಂಜಿನಿಯರಿಂಗ್‌ನಲ್ಲಿ ಅಂತರ್‌ಶಿಸ್ತೀಯ ಪಿಎಚ್‌.ಡಿ ಕಾರ್ಯಕ್ರಮಗಳಿಗೆ ಆಯ್ಕೆಯಾಗಿದ್ದಾರೆ. ಐಐಎಸ್‌ಸಿ, ಐಐಟಿ ಬಾಂಬೆ, ಐಐಟಿ ಮದ್ರಾಸ್, ಐಐಟಿ ದೆಹಲಿ, ಐಐಟಿ ಖರಗಪುರ, ಐಐಎಸ್‌ಇಆರ್ ಪುಣೆಯಲ್ಲಿ ಪಿಎಚ್‌.ಡಿ ಮಾಡಲು ಅವಕಾಶವಿದೆ. 24ರ ಪೈಕಿ 10 ವಿದ್ಯಾರ್ಥಿಗಳು ಬೆಂಗಳೂರಿನ ಐಐಎಸ್‌ಸಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT