ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ರಾಷ್ಟ್ರದ ಆತ್ಮ, ಅವರನ್ನು ಗೌರವಿಸಿ: ಎಚ್.ಡಿ.ದೇವೇಗೌಡರಿಂದ ಪ್ರಧಾನಿಗೆ ಪತ್ರ

Last Updated 13 ಏಪ್ರಿಲ್ 2020, 16:08 IST
ಅಕ್ಷರ ಗಾತ್ರ

ಬೆಂಗಳೂರು: "ರೈತರು ರಾಷ್ಟ್ರದ ಆತ್ಮವಿದ್ದಂತೆ, ಅವರನ್ನು ಗೌರವಿಸಿ" ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪತ್ರ ಮುಖೇನ ಸಲಹೆ ನೀಡಿದ್ದಾರೆ.

ಅಲ್ಲದೆ, ಲಾಕ್‌‌ಡೌನ್‌ನಿಂದಾಗಿ ರೈತರು ಹಾಗೂ ದುಡಿಯುವ ವರ್ಗದ ಮೇಲಾಗುವ ದುಷ್ಪರಿಣಾಮ ಕಡಿಮೆ ಮಾಡುವಂತೆ ಅವರು ಸಲಹೆ ನೀಡಿದ್ದಾರೆ.ಈ ಸಂಬಂಧ ಪತ್ರ ಬರೆದಿರುವ ಜೆಡಿಎಸ್ ವರಿಷ್ಟರೂ ಆದ ಎಚ್.ಡಿ.ದೇವೇಗೌಡ ಅವರು, ಜನವರಿಯಲ್ಲಿ ದೇಶದಲ್ಲಿ ಮೊದಲ ಕೊರೊನಾ ಸೋಂಕು ಪ್ರಕರಣ ಪತ್ತೆಯಾಗಿದೆ.

ಆದರೆ, ಯಾವುದೇ ಮುನ್ಸೂಚನೆ, ಪೂರ್ವತಯಾರಿ ಇಲ್ಲದೆ ಲಾಕ್ ಡೌನ್ ಜಾರಿಯಾಗಿದ್ದು ಎರಡು ತಿಂಗಳ ನಂತರ, ಅಲ್ಲದೆ,ಯಾವುದೇ ಮುನ್ಸೂಚನೆ ಇಲ್ಲದೆ ಲಾಕ್ ಡೌನ್ ಜಾರಿಗೆ ತಂದಿರುವುದು ರೈತರು, ಕೃಷಿಕಾರ್ಮಿಕರು ಹಾಗೂದಿನಗೂಲಿಯವರಿಗೆ ಸಾಕಷ್ಟು ಸಂಕಷ್ಟ ತಂದೊಡ್ಡಿದೆಎಂದು ಆರೋಪಿಸಿದ್ದಾರೆ.

ಆದಾಗ್ಯೂ ಪ್ರಧಾನಿ ಮೋದಿ ಅವರು ಮಾರಣಾಂತಿಕ ಕೊರೊನಾ ಸೋಂಕು ತಡೆಗಟ್ಟಲು ತೆಗೆದುಕೊಂಡ ಕ್ರಮಗಳು ಶ್ಲಾಘನೀಯ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಲಾಕ್ ಡೌನ್ ವಿಧಿಸುವ ಮುನ್ನ, ಪ್ರಮುಖವಾಗಿ ಸಣ್ಣ ಮತ್ತು ಅತಿ ಸಣ್ಣ ರೈತರು, ಕೃಷಿ ಕಾರ್ಮಿಕರು ಮತ್ತು ದಿನಗೂಲಿ ಕಾರ್ಮಿಕರ ಮೇಲಾಗುವ ದುಷ್ಪರಿಣಾಮಗಳ ಕುರಿತುಆಯಾ ರಾಜ್ಯಗಳು, ಅನುಭವಿ ಮತ್ತು ಪ್ರಾಮಾಣಿಕ ನಾಗರಿಕರು, ಬದ್ಧ ಅಧಿಕಾರಿಗಳು, ಪ್ರಗತಿಪರ ರೈತರು, ರೈತರ ಕಲ್ಯಾಣಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳೊಂದಿಗೆ ಚರ್ಚಿಸಬೇಕಾಗಿತ್ತು ಎಂದಿದ್ದಾರೆ.

ಸರಿಯಾದ ಯೋಜನೆ, ಸಿದ್ಧತೆಗಳು ಮತ್ತು ಮುನ್ಸೂಚನೆಯಿಲ್ಲದೆದೇಶದಲ್ಲಿ ಲಾಕ್ ಡೌನ್ ಜಾರಿ ಮಾಡಿದ್ದರಿಂದ ರೈತರು ಮತ್ತು ಅವಲಂಬಿತ ಕಾರ್ಮಿಕರನ್ನು ಆರ್ಥಿಕಸಂಕಷ್ಟಕ್ಕೆ ಸಿಲುಕಿಸಿದೆ ಎಂದು ದೇವೇಗೌಡ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ವಾರ ಇದೇ ಮಾದರಿಪತ್ರವನ್ನು ಕರ್ನಾಟಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಬರೆದಿದ್ದರು. ಪತ್ರದಲ್ಲಿ ಲಾಕ್‌ಡೌನ್ ಘೋಷಿಸಿದಾಗಯಾರೂ ಚಿನ್ನ, ಭೂಮಿ, ಕಾರುಗಳು, ದುಬಾರಿ ಸೆಲ್‌ಫೋನ್‌ಗಳು ಅಥವಾ ಉಡುಪುಗಳನ್ನು ಖರೀದಿಸಲು ಮುಂದಾಗಲಿಲ್ಲ, ಆದರೆ ತರಕಾರಿಗಳು, ಹಣ್ಣುಗಳು, ಹಾಲು, ಅಕ್ಕಿ,ರಾಗಿ ಮತ್ತು ಗೋಧಿ ಮಾತ್ರ. ಅದಕ್ಕಾಗಿರೈತರು ರಾಷ್ಟ್ರದ ಆತ್ಮವಿದ್ದಂತೆಅವರನ್ನು ಗೌರವಿಸಿ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT