ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಬರಿಮಲೆ| ವಿಸ್ತೃತ ಪೀಠಕ್ಕೆ ಅರ್ಜಿ ವರ್ಗಾಯಿಸುವ ಅಧಿಕಾರ ಇದೆ ಎಂದ ಸುಪ್ರೀಂ

ಶಬರಿಮಲೆ ಪ್ರಕರಣ
Last Updated 11 ಮೇ 2020, 20:15 IST
ಅಕ್ಷರ ಗಾತ್ರ

ನವದೆಹಲಿ: ‘ಪುನರ್‌ಪರಿಶೀಲನಾ ಅರ್ಜಿಗಳನ್ನು ವಿಸ್ತ್ರೃತ ಪೀಠಕ್ಕೆ ವರ್ಗಾಯಿಸುವ ನಿರ್ಣಯದ ವಿಚಾರದಲ್ಲಿತನ್ನ‌ ವಿವೇಚನೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ’ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಸ್ಪಷ್ಟಪಡಿಸಿದೆ.

ಶಬರಿಮಲೆ ತೀರ್ಪು ಕುರಿತಂತೆ ಹಕ್ಕುಗಳ ವ್ಯಾಪ್ತಿಯನ್ನು ಪರೀಕ್ಷಿಸುವ ನಿರ್ಧಾರ ತೆಗೆದುಕೊಂಡ ಕುರಿತು ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬಡೆ ಅವರಿದ್ದ ಒಂಬತ್ತು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ಈ ಬಗ್ಗೆ ವಿವರವಾದ ಕಾರಣಗಳನ್ನು ನೀಡಿದೆ.

ಮರು ಪರಿಶೀಲನಾ ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ ಅರ್ಜಿಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುವ ಅಧಿಕಾರ ಸುಪ್ರೀಂ ಕೋರ್ಟ್‌ಗಿದೆ ಎಂದು ಪೀಠವು ತಿಳಿಸುವ ಮೂಲಕ ಹಿರಿಯ ವಕೀಲ ಎಫ್‌.ಎಸ್.ನಾರಿಮನ್‌ ಮತ್ತು ಇತರರ ಆಕ್ಷೇಪವನ್ನು ತಿರಸ್ಕರಿಸಿತು. ‘ಸಿವಿಲ್‌ ಮತ್ತು ಕ್ರಿಮಿನಲ್‌
ಪ್ರಕರಣಗಳಲ್ಲಿನ ಸಂದರ್ಭಗಳನ್ನು ಹೊರತುಪಡಿಸಿ ಮರುಪರಿಶೀಲನಾ ಅರ್ಜಿಗಳ ಕುರಿತ ತೀರ್ಪುಗಳು ಅಥವಾ ಆದೇಶಗಳ ಬಗ್ಗೆ ತನ್ನ ಅಧಿಕಾರವನ್ನು ಚಲಾಯಿಸಲು ಯಾವುದೇ ರೀತಿ ನಿಯಂತ್ರಣ ವಿಧಿಸಿಲ್ಲ’ ಎಂದು ಪೀಠವು ಅಭಿಪ್ರಾಯಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT