3

ಪತ್ರಕರ್ತ ಶುಜಾತ್ ಬುಖಾರಿ ಹತ್ಯೆ ಪ್ರಕರಣ: ಹಂತಕರ ಗುರುತು ಪತ್ತೆ

Published:
Updated:

ಶ್ರೀನಗರ: 'ರೈಸಿಂಗ್ ಕಾಶ್ಮೀರ್' ಪತ್ರಿಕೆಯ ಸಂಪಾದಕ ಶುಜಾತ್ ಬುಖಾರಿ ಅವರ ಹತ್ಯೆಗೆ ಸಂಬಂಧಿಸಿದಂತೆ ಮೂವರು ಹಂತಕರ ಗುರುತು ಪತ್ತೆ ಹಚ್ಚಲಾಗಿದೆ.

ಶುಜಾತ್ ಅವರ ಹತ್ಯೆಗೈದ ವ್ಯಕ್ತಿಗಳ ಗುರುತು ಪತ್ತೆ ಹಚ್ಚುವ ಮೂಲಕ ಪ್ರಕರಣ ಭೇದಿಸಲಾಗಿದೆ ಎಂದು ಎಂದು ಜಮ್ಮು ಮತ್ತು ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಹಂತಕರಲ್ಲಿ ಇಬ್ಬರು ಕಾಶ್ಮೀರದವರಾಗಿದ್ದು ಓರ್ವ ಪಾಕಿಸ್ತಾನಿಯಾಗಿದ್ದಾನೆ. ಪಾಕಿಸ್ತಾನ ಮೂಲದ ಆರೋಪಿಯನ್ನು ನವೀದ್ ಜಟ್ ಎಂದು ಗುರುತಿಸಿದ್ದು ಈತ ಪೊಲೀಸ್ ಬಂಧನದಿಂದ ತಪ್ಪಿಸಿಕೊಂಡವನಾಗಿದ್ದಾನೆ.

ಜೂನ್ 14ರಂದು ಶುಜಾತ್ ಅವರು ಕಾರಿನಲ್ಲಿ ಬರುತ್ತಿದ್ದ ವೇಳೆ ದುಷ್ಕರ್ಮಿಗಳು ಗುಂಡಿನ ಮಳೆಗೆದಿದ್ದರು. ತೀವ್ರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರೂ, ಪ್ರಾಣ ಉಳಿಸಲಾಗಲಿಲ್ಲ. 
ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಶ್ರೀನಗರದ ಡಿಐಜಿ ನೇತೃತ್ವದ ವಿಶೇಷ ತನಿಖಾ ತಂಡ ಹಂತಕರನ್ನು ಪತ್ತೆ ಹಚ್ಚಿತ್ತು. ಅದೇ ವೇಳೆ  ಶುಜಾತ್ ಅವರ ವಿರುದ್ಧ ಬರೆದ ಅನಾಮಿಕ ಬ್ಲಾಗರ್ ಮತ್ತು ಇತರ ಪತ್ರಕರ್ತರನ್ನೂ ಗುರುತು ಹಚ್ಚಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ಹಿಂದೆ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದರೂ, ಆ ವ್ಯಕ್ತಿಗಳು ಬುಖಾರಿ ಹತ್ಯೆಯಲ್ಲಿ ಕೈವಾಡ ಹೊಂದಿಲ್ಲ ಎಂದಿದ್ದಾರೆ ಪೊಲೀಸರು.
 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !