ಬಿಹಾರದಲ್ಲಿ ಎನ್‌ಡಿಎ ಮೈತ್ರಿ ತೊರೆಯುವ ನಿರ್ಧಾರ: ಆರ್‌ಎಲ್‌ಎಸ್‌ಪಿಯಲ್ಲಿ ಅಪಸ್ವರ

7

ಬಿಹಾರದಲ್ಲಿ ಎನ್‌ಡಿಎ ಮೈತ್ರಿ ತೊರೆಯುವ ನಿರ್ಧಾರ: ಆರ್‌ಎಲ್‌ಎಸ್‌ಪಿಯಲ್ಲಿ ಅಪಸ್ವರ

Published:
Updated:

ಪಟ್ನಾ: ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟದಿಂದ ಹೊರಬರುತ್ತೇವೆ ಎಂದು ರಾಷ್ಟ್ರೀಯ ಲೋಕ ಸಮತಾ ಪಕ್ಷದ (ಆರ್‌ಎಲ್‌ಎಸ್‌ಪಿ) ಅಧ್ಯಕ್ಷ ಉಪೇಂದ್ರ ಕುಶ್ವಾಹ ಘೋಷಿಸಿರುವುದಕ್ಕೆ ಅವರದೇ ಪಕ್ಷದೊಳಗೆ ಅಪಸ್ವರ ಎದ್ದಿದೆ.

‘ಉಪೇಂದ್ರ ಅವರು ಸ್ವಹಿತಾಸಕ್ತಿಯಿಂದ ಎನ್‌ಡಿಎ ಮೈತ್ರಿಕೂಟ ತೊರೆಯುವುದಾಗಿ ಘೋಷಿಸಿದ್ದಾರೆ. ಆದರೆ ನಾವು ಈಗಲೂ ಎನ್‌ಡಿಎಯಲ್ಲಿಯೇ ಇದ್ದೇವೆ' ಎಂದು ಆರ್‌ಎಲ್‌ಎಸ್‌ಪಿ ಶಾಸಕರಾದ ಸುಧಾಂಶು ಶೇಖರ್‌, ಲಲನ್‌ ಪಾಸ್ವಾನ್‌ ಮತ್ತು ವಿಧಾನ ಪರಿಷತ್‌ ಸದಸ್ಯ ಸಂಜೀವ್‌ ಸಿಂಗ್‌ ಶ್ಯಾಮ್‌ ತಿಳಿಸಿದ್ದಾರೆ.

ನಿಜಕ್ಕೂ ಪಕ್ಷವನ್ನು ನಾವು ಪ್ರತಿನಿಧಿಸುತ್ತಿದ್ದೇವೆ. ಹೆಚ್ಚಿನ ಕಾರ್ಯಕರ್ತರ ಬೆಂಬಲ ಕೂಡ ನಮಗಿದೆ ಎಂದು ಚುನಾವಣಾ ಆಯೋಗಕ್ಕೂ ತಿಳಿಸುವುದಾಗಿ ಶಾಸಕರು ಹೇಳಿದ್ದಾರೆ.

ಶಾಸಕರ ಈ ಹೇಳಿಕೆಯು ಆರ್‌ಎಲ್‌ಎಸ್‌ಪಿ ಇಬ್ಭಾಗವಾಗುವ ಸೂಚನೆ ನೀಡಿದೆ.

 

Tags: 

ಬರಹ ಇಷ್ಟವಾಯಿತೆ?

 • 2

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !