ಭಾನುವಾರ, ನವೆಂಬರ್ 17, 2019
24 °C

ಬೆನ್ನು ನೋವು: ರಾಬರ್ಟ್ ವಾದ್ರಾ ಆಸ್ಪತ್ರೆಗೆ ದಾಖಲು

Published:
Updated:

ನೊಯ್ಡಾ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾ ಸೋಮವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಬೆನ್ನು ನೋವಿನಿಂದ ಬಳಲುತ್ತಿರುವ ವಾದ್ರಾ ನೋಯ್ಡಾದ ಮೆಟ್ರೋ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 

ವಾದ್ರಾ ಅವರು ಬೆನ್ನು ನೋವಿನ ಹಿನ್ನೆಲೆ ಸೋಮವಾರ ಮಧ್ಯಾಹ್ನ ಆಸ್ಪತ್ರೆಗೆ ದಾಖಲಾದರು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. 

ಪ್ರತಿಕ್ರಿಯಿಸಿ (+)